ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಹಾವಿನಿಂದ ಕಚ್ಚಿಸಿಕೊಂಡು ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಹೈದರಾಬಾದ್​, ಜ.27. ಹಾವಿನ ಜೊತೆ ಸೆಲ್ಫಿ ತೆಗೆಯುವಾಗ ಹಾವು ಕಡಿದು ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಮೃತನನ್ನು ಮಣಿಕಂಠ ರೆಡ್ಡಿ (32) ಎಂದು ಗುರುತಿಸಲಾಗಿದೆ. ಮಣಿಕಂಠ ಅವರ ಅಂಗಡಿಗೆ ಹಾವಾಡಿಗನೊಬ್ಬ ಬಂದಿದ್ದಾನೆ. ಈ ವೇಳೆ ತನ್ನ ಬಳಿ ಅನೇಕ ಹಾವುಗಳಿವೆ ಮತ್ತು ಅವು ಯಾರಿಗೂ ಹಾನಿ ಮಾಡುವುದಿಲ್ಲ ಎಂದು ಹೇಳಿದ್ದಾನೆ.

ಹಾವಾಡಿಗ ಹೇಳಿದ ಮಾತನ್ನು ನಂಬಿದ ಮಣಿಕಂಠ ಹಾವಿನ ಜೊತೆ ಸೆಲ್ಫಿ ತೆಗೆದುಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಹಾವಾಡಿಗ ತಕ್ಷಣವೇ ಹಾವುಗಳಲ್ಲಿ ಒಂದು ಹಾವನ್ನು ತೆಗೆದುಕೊಂಡು ಮಣಿಕಂಠನ ಕುತ್ತಿಗೆಗೆ ಹಾಕಿದನು. ಬಳಿಕ ಮಣಿಕಂಠ ಸೆಲ್ಫಿ ತೆಗೆಯುವಾಗ ಕೈಗೆ ಹಾವು ಕಚ್ಚಿದೆ. ಈ ಬಗ್ಗೆ ಮಣಿಕಂಠ ಹಾವಾಡಿಗನ ಬಳಿ ತಿಳಿಸಿದ್ದರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾನೆ. ಇದಾದ ಸ್ವಲ್ಪ ಹೊತ್ತಿನ ನಂತರ ಮಣಿಕಂಠ ಅಸ್ವಸ್ಥಗೊಂಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮಣಿಕಂಠ ಮೃತಪಟ್ಟಿದ್ದಾನೆ.

Also Read  ಬಸ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ➤ 14 ಮಂದಿ ದುರ್ಮರಣ

error: Content is protected !!
Scroll to Top