(ನ್ಯೂಸ್ ಕಡಬ)newskadaba.com ನವದೆಹಲಿ, ಜ.27. ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್ ಭಾರತದಲ್ಲಿ ಕೆಲವು ಕಾಲ ಡೌನ್ ಆಗಿತ್ತು. ಟೀಮ್ಸ್ ಸರ್ವರ್ ಡೌನ್ ಆಗಿರುವ ಬಗ್ಗೆ ಡೌನ್ಡಿಟೆಕ್ಟರ್ ಸುಮಾರು 3,500ರಷ್ಟು ಮಂದಿ ವರದಿ ಮಾಡಿದ್ದರು. ಲಿಂಕ್ಡ್ಇನ್ ಸರ್ವರ್ ಕೂಡ ಡೌನ್ ಆಗಿತ್ತು. ಸಮಸ್ಯೆ ಇರುವುದನ್ನು ಮೈಕ್ರೋಸಾಫ್ಟ್ ಒಪ್ಪಿಕೊಂಡಿದೆ.
ಈ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಗಳು ಭಾರಿ ಖುಷಿಯಲ್ಲಿ ಕೆಲವು ಕ್ಷಣ ಕಳೆದಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲವು ನಿಮಿಷಗಳ ಆನಂದವನ್ನು ಇವರು ಆಚರಿಸುತ್ತಿದ್ದು, ಅದೀಗ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ತನಿಖೆಗೆ ಆದೇಶಿಸಿದೆ.