ಬಂಟ್ವಾಳ:  ವಿಚಾರಣಾಧೀನ ಕೈದಿಯಿಂದ ಗಾಂಜಾ ವಶ          

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜ.25. ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾರಾಗೃಹಕ್ಕೆ ವಾಪಾಸ್ ಕರೆತಂದ ವಿಚಾರಣಾಧೀನ ಕೈದಿಯ ಬಳಿ ಗಾಂಜಾ ಪತ್ತೆಯಾಗಿದೆ.

ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಹಮ್ಮದ್ ಅಸ್ರು ಯಾನೆ ಮುಹಮ್ಮದ್ ಅಲಿ ಎಂಬಾತನನ್ನು ಇತರ ವಿಚಾರಣಾಧೀನ ಕೈದಿಗಳೊಂದಿಗೆ ಬಂಟ್ವಾಳದ ನ್ಯಾಯಾಲಯಕ್ಕೆ ಡಿಎಆರ್ ಬೆಂಗಾವಲಿನ ಮೂಲಕ ಕಳುಹಿಸಿಕೊಡಲಾಗಿತ್ತು ಎನ್ನಲಾಗಿದೆ.

ಮರಳಿ ಕಾರಾಗೃಹಕ್ಕೆ ಬರುವಾಗ ಮುಖ್ಯದ್ವಾರದಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಆತನ ಬಳಿ ಪ್ಯಾಕ್ ಮಾಡಿಟ್ಟ ಗಾಂಜಾ ಪತ್ತೆಯಾಗಿದೆ ಎಂದು ಬರ್ಕೆ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

Also Read  ಅಡುಗೆ ಕೋಣೆಯೊಳಗೆ ನುಗ್ಗಿದ ಚಿರತೆ- ಸೆರೆಹಿಡಿದ ಅರಣ್ಯ ಇಲಾಖೆ

 

error: Content is protected !!
Scroll to Top