ಕಾಫಿ ಡೇಗೆ 26 ಕೋಟಿ ರೂ. ದಂಡ ➤  45 ದಿನದಲ್ಲಿ ಪಾವತಿಸಲು ಗಡುವು

(ನ್ಯೂಸ್ ಕಡಬ)newskadaba.com ಮೈಸೂರು, ಜ.25. ಕಾಫಿ ಡೇ ಎಂಟರ್ ಪ್ರೈಸಸ್ ಗೆ ಮಾರುಕಟ್ಟೆ ನಿಗಾ ಸಂಸ್ಥೆ ಸೆಬಿ 26 ಕೋಟಿ ರೂ (3.2 ದಶಲಕ್ಷ ಡಾಲರ್) ದಂಡ ವಿಧಿಸಿದ್ದು, 45 ದಿನದೊಳಗೆ ಪಾವತಿಸುವಂತೆ ಗಡುವು ವಿಧಿಸಿದೆ.

ಸೆಕ್ಯೂರೆಟಿಸ್ ಅಂಡ್ ಎಕ್ಸ್ ಚೆಂಜ್ ಬೋರ್ಡ್ ಆಫ್ ಇಂಡಿಯಾ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಈ ವಿಷಯ ಪ್ರಕಟಿಸಿದ್ದು, ತನ್ನ ಸೋದರ ಸಂಸ್ಥೆಗಳಿಂದ 35.35 ಶತಕೋಟಿ ರೂಪಾಯಿ ಹಣ ಬಾಕಿ ಇರಿಸಿಕೊಂಡಿದೆ. ಈ ಮೂಲಕ ಹಣಕಾಸು ವಹಿವಾಟಿನಲ್ಲಿ ಎಡವಿದೆ ಎಂದು ಹೇಳಿದೆ. ಮೈಸೂರಿನ ಅಮಲ್ ಗ್ಯಾಮೆಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ ಮತ್ತು ಸಂಬಂಧಪಟ್ಟ ಕಂಪನಿಗಳಿಂದ ಕಾಫಿ ಡೇ ಬಾಕಿ ಇರಿಸಿಕೊಂಡಿದೆ ಎಂದು ಹೇಳಿದೆ.

Also Read  ಸಾರಿಗೆ ನೌಕರರ ಮುಷ್ಕರಕ್ಕೆ ಕೋರ್ಟ್ ತಡೆ ➤ 3 ವಾರ ಮುಷ್ಕರ ಮಾಡದಂತೆ ಆದೇಶ

error: Content is protected !!
Scroll to Top