ಅಮೆರಿಕದಲ್ಲಿ ಕೆಲಸ ಕಳೆದುಕೊಂಡ 80 ಸಾವಿರಕ್ಕೂ ಹೆಚ್ಚು ಭಾರತೀಯರು ಈಗ ಅತಂತ್ರ !

(ನ್ಯೂಸ್ ಕಡಬ)newskadaba.com ವಾಷಿಂಗ್ಟನ್​, ಜ.25. ಭಾರತದ 80 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಅಮೆರಿಕದ ಟೆಕ್ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ. ಬರೋಬ್ಬರಿ 3 ಲಕ್ಷ ಜನ ಉದ್ಯೋಗಿಗಳನ್ನ ಕಳೆದುಕೊಂಡು ಅತಂತ್ರರಾಗಿದ್ದಾರೆ. ಇದರಲ್ಲಿ 80 ಸಾವಿರ ಮಂದಿ ಭಾರತೀಯರೆಂದು ತಿಳಿದುಬಂದಿದೆ.

ಅಮೆರಿಕವು ಕೌಶಲ್ಯಯುತ ಉದ್ಯೋಗಿಗಳಿಗಾಗಿ H-1B, L1 ಎನ್ನುವ ಕಠಿಣ ನಿಯಮದ ವೀಸಾ ನೀಡುತ್ತದೆ. ಸದ್ಯ ಈಗ ಜಾಬ್​ ಕಳೆದುಕೊಂಡವರೆಲ್ಲ ಬಹುತೇಕ ಈ ವೀಸಾ ಹೊಂದಿದವರೇ ಆಗಿದ್ದಾರೆ. ಅಮೆರಿಕದಲ್ಲಿ ಈ ವೀಸಾ ಹೊಂದಿದವರು ಯಾರೇ ಆಗಿರಲಿ ಜಾಬ್​ ಕಳೆದುಕೊಂಡ 60 ದಿನದಲ್ಲಿ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಬೇಕು. ಇಲ್ಲದಿದ್ರೆ ಈ ವೀಸಾ ರದ್ದು ಆಗಿ ಅವರು ತಮ್ಮ ತಮ್ಮ ದೇಶಗಳಿಗೆ ಮರಳಬೇಕಾಗುತ್ತದೆ.

ಆರ್ಥಿಕ ಕುಸಿತ, ಕಂಪನಿಯ ವೆಚ್ಚ ಕಡಿತದಿಂದ ಮೈಕ್ರೋಸಾಫ್ಟ್, ಮೇಟಾ, ಅಮೇಜಾನ್, ಗೂಗಲ್, ಅಲ್ಪಬೆಟ್​ ಸೇರಿದಂತೆ ವಿವಿಧ ಕಂಪನಿಗಳು ಉದ್ಯೋಗಿಗಳನ್ನ ವಜಾ ಮಾಡಿವೆ. ಎಂಜಿನಿಯರ್, ಡಾಟಾ ಅನಲಿಸ್ಟ್, ವಿಜ್ಞಾನಿಗಳು, ಕ್ಲೌಡ್ ಇಂಜಿನಿಯರ್ಸ್, ಆಪರೇಷನ್​ ಸ್ಪೆಷಲಿಸ್ಟ್ ಹುದ್ದೆ ಸೇರಿದಂತೆ ಪ್ರಮುಖ ಹುದ್ದೆಯಲ್ಲಿರುವವರು ಕೂಡ ಜಾಬ್ ಕಳೆದುಕೊಂಡಿದ್ದಾರೆ.

 

error: Content is protected !!

Join the Group

Join WhatsApp Group