ವಿಟ್ಲ ಪರಿಸರದಲ್ಲಿ ಮುಂದುವರಿದ ಕಳ್ಳರ ಕಾಟ ► ಮನೆಯ ಮುಂಭಾಗದ ಬೀಗ ಮುರಿದು ಕಳ್ಳತನ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ.18. ವಿಟ್ಲ ಪರಿಸರದಲ್ಲಿ ಕಳ್ಳರ ಕಾಟ ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿದ್ದು, ಯಾರೂ ಇಲ್ಲದ ವೇಳೆ ಮನೆಯೊಂದರ ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ಎಗರಿಸಿದ ಘಟನೆ ಸೋಮವಾರದಂದು ಬೆಳಕಿಗೆ ಬಂದಿದೆ.

ಇಲ್ಲಿನ ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ಕೆ.ಪಿ ಸುಲೈಮಾನ್ ಎಂಬವರ ಮನೆಯ ಮುಂಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಮನೆಯ ನಾಲ್ಕು ಕೋಣೆಯ ಕಪಾಟ್ ಗಳಲ್ಲಿ ಸ್ವತ್ತಿಗಾಗಿ ಜಾಲಾಡಿದ್ದಾರೆ. ನಂತರ ವಿದೇಶಿಯ ವಸ್ತುಗಳಾದ 10 ಹಾಲಿನ ಹುಡಿ ಪ್ಯಾಕೇಟ್‌, 3 ಬ್ಲಾಂಕೆಟ್, 6 ವಿದೇಶಿ ಲೈಟ್, ಬಟ್ಟೆ ಬರೆ ಸೇರಿದಂತೆ ಬೆಲೆಬಾಳುವ ಸ್ವತ್ತುಗಳನ್ನು ಎಗರಿಸಿದ್ದಾರೆ. ಒಂದು ಲಕ್ಷಕ್ಕಿಂತ ಅಧಿಕ ಮೌಲ್ಯದ ಸ್ವತ್ತುಗಳು ಕಳವು ಆಗಿದೆ. ಮನೆಯಲ್ಲಿ ಯಾರೂ ಇಲ್ಲದ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!

Join the Group

Join WhatsApp Group