ಭಾರತದಲ್ಲಿ ಜೀವನ ವೆಚ್ಚವು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಲಿದೆ ➤ ವರ್ಲ್ಡ್‌ ಎಕನಾಮಿಕ್‌ ಫೋರಮ್‌ !

(ನ್ಯೂಸ್ ಕಡಬ)newskadaba.com ನವದೆಹಲಿ, ಜ.23. ಈಗಾಗಲೇ ಸಾಂಕ್ರಾಮಿಕ ಕೋವಿಡ್ಜಗತ್ತನ್ನೇ ಕಂಗೆಡಿಸಿದೆ. ಇದರ ಜೊತೆಗೆ ಹವಾಮಾನ ಬದಲಾವಣೆ, ಆರ್ಥಿಕ ಬಿಕ್ಕಟ್ಟು, ಆರ್ಥಿಕ ಹಿಂಜರಿತದಂಥ ಜಾಗತಿಕ ಸಮಸ್ಯೆಗಳು ಎದುರಾಗಿದೆ. ಈ ಮಧ್ಯೆ ಭಾರತದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಜೀವನ ವೆಚ್ಚವು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಲಿದೆ.

ವರ್ಲ್ಡ್‌ ಎಕನಾಮಿಕ್‌ ಫೋರಮ್‌ ಇತ್ತೀಚಿಗೆ ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ. “ಗ್ಲೋಬಲ್ ರಿಸ್ಕ್ ರಿಪೋರ್ಟ್ 2023” ಎಂಬ ಶೀರ್ಷಿಕೆಯ ಈ ವರದಿಯ ಪ್ರಕಾರ ಭಾರತದಲ್ಲಿ ಜೀವನ ವೆಚ್ಚದ ಬಿಕ್ಕಟ್ಟು ಹೊರಹೊಮ್ಮಬಹುದು ಎಂಬುದಾಗಿ ಹೇಳಲಾಗಿದೆ.

Also Read  ಅಕ್ರಮ ಮದ್ಯ ಶೇಖರಣೆ: ಓರ್ವ ಅರೆಸ್ಟ್..!

ಡಿಜಿಟಲ್ ಅಸಮಾನತೆ ಮತ್ತು ಜೀವನ ವೆಚ್ಚದ ಬಿಕ್ಕಟ್ಟು ಮತ್ತು ನೈಸರ್ಗಿಕ ವಿಕೋಪಗಳು ಭಾರತಕ್ಕೆ ಅಲ್ಪಾವಧಿಯಲ್ಲಿ ಮತ್ತು ಮಧ್ಯಮಾವಧಿಯಲ್ಲಿ ಪ್ರಮುಖ ಅಪಾಯಗಳಾಗಿವೆ ಎಂದು ವರದಿ ಹೇಳಿದೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ, ಜೀವನ ವೆಚ್ಚದ ಬಿಕ್ಕಟ್ಟು ದೊಡ್ಡ ಅಪಾಯಗಳಲ್ಲಿ ಒಂದಾಗಲಿದೆ ಎಂದು ವರದಿ ಹೇಳಿದೆ.

 

error: Content is protected !!
Scroll to Top