ಭಾರತವನ್ನು ಹಿಮ್ಮೆಟ್ಟಿಸಲು ಅಸಾಧ್ಯ ➤ ಸಚಿವ ಅಮಿತ್‌ ಶಾ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಜ.21. ದೇಶದ ಭದ್ರತಾಸಂಸ್ಥೆಗಳು ತಮ್ಮ ಕಾರ್ಯವೈಖರಿಯಲ್ಲಿ ಪಾರಮ್ಯ ಮೆರೆದಿದ್ದು, ಇಂದಿಗೆ ಭಾರತವನ್ನು ಯಾರಿಗೂ ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ. ನಿರ್ಲಕ್ಷಿಸಲೂ ಕೂಡ ಆಸ್ಪದವಿಲ್ಲವೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಡಿಜಿಪಿ ಹಾಗೂ ಐಜಿಪಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಿಂದೆಂದಿಗಿಂತ ಸುರಕ್ಷಿತ, ಸದೃಢ ಹಾಗೂ ಉತ್ತಮ ಸ್ಥಾನದಲ್ಲಿದೆ ಎಂದಿದ್ದಾರೆ. ಅಲ್ಲದೇ, ಮೋದಿ ಅವರ ಆಡಳಿತದಲ್ಲಿ ಭದ್ರತಾ ಸಂಸ್ಥೆಗಳು ಸ್ವತಂತ್ರವಾಗಿದ್ದು, ದೇಶ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಪ್ರಾಬಲ್ಯ ಮೆರೆದಿವೆ. ಇಂದು ಯಾವುದೇ ಶಕ್ತಿಯೂ ಭಾರತವನ್ನ ಹಿಮ್ಮೆಟ್ಟಿಸುವ ಮಾತೇ ಇಲ್ಲ ಎಂದು ಶಾ ಭದ್ರತಾ ಸಂಸ್ಥೆಗಳನ್ನು ಶ್ಲಾಗಿಸಿದ್ದಾರೆ.

Also Read  ಪತ್ನಿಯ ಮೇಲಿನ ದ್ವೇಷಕ್ಕೆ 18 ಮಂದಿ ಮಹಿಳೆಯರನ್ನು ಹತ್ಯೆಗೈದ ನರಹಂತಕ..!

error: Content is protected !!
Scroll to Top