➤ಮಹಿಳಾ ಐಪಿಎಲ್ ಖರೀದಿಸಲು ಮುಂದೆ ಬಂದ 30 ಕಂಪನಿಗಳು

ನ್ಯೂಸ್ ಕಡಬ) newskadaba.com. ಮುಂಬೈ, ಜ. 21. ಇದೇ ಮೊದಲ ಬಾರಿಗೆ ಮಹಿಳಾ ಐಪಿಎಲ್ ನಡೆಸಲು ಬಿಸಿಸಿಐ ಮುಂದೆ ಬಂದಿದೆ. ಇದಕ್ಕಾಗಿ ಸಿದ್ದತೆಗಳು ಭರದಿಂದ ನಡೆಯುತ್ತಿದೆ. ಇದೀಗ ಮಹಿಳಾ ಐಪಿಎಲ್ ತಂಡಗಳನ್ನು ಖರೀದಿ ಮಾಡಲು ಟೆಂಡರ್ ಆಹ್ವಾನ ಮಾಡಿದ್ದು, ಸುಮಾರು 30 ಕಂಪನಿಗಳು ಆಸಕ್ತಿ ತೋರಿಸಿದೆ ಎಂದು ತಿಳಿದು ಬಂದಿದೆ.

ಇದುವರೆಗೆ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳದ ತಂಡಗಳೂ ಮಹಿಳಾ ಐಪಿಎಲ್ ತಂಡ ಹೊಂದಲು ಮುಂದೆ ಬಂದಿವೆ. ಚೆನ್ನೈ ಮೂಲದ ಶ್ರೀರಾಮ್ ಗ್ರೂಪ್, ನೀಲಗಿರಿ ಗ್ರೂಪ್, ಎಡಬ್ಲ್ಯೂ ಗ್ರೂಪ್, ಎಪಿಎಲ ಅಪೋಲೊ, ಹಳದಿರಾಮ್ ಸಂಸ್ಥೆಗಳು ಆಸಕ್ತಿ ತೋರಿಸಿದೆ.

ಆದರೂ ಮಹಿಳಾ ಐಪಿಎಲ್ ಭಾರತೀಯ ಕಾರ್ಪೊರೇಟ್ ಗಳನ್ನು ಉತ್ಸಾಹಿಸುತ್ತಿರುವುದು ಗಮನಿಸಬೇಕಾದ ವಿಚಾರ. ಸಿಮೆಂಟ್ ಕಂಪನಿಗಳಾದ ಚೆಟ್ಟಿನಾಡ್ ಸಿಮೆಂಟ್ ಮತ್ತು ಜೆಕೆ ಸಿಮೆಂಟ್ ಗಳು ಆಸಕ್ತಿ ಹೊಂದಿದೆ. ಒಂದು ವೇಳೆ ಬಿಡ್ ಗೆದ್ದರೆ ಐಪಿಎಲ್ ನಲ್ಲಿ ಪಾಲ್ಗೊಂಡ ಮೂರನೇ ಸಿಮೆಂಟ್ ಕಂಪನಿಯಾಗಿರಲಿದೆ. ಈಗಾಗಲೇ ಇಂಡಿಯಾ ಸಿಮೆಂಟ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ರಾಂಚೈಸಿ ಹೊಂದಿದೆ.

error: Content is protected !!

Join the Group

Join WhatsApp Group