ವಿನಾಕಾರಣ ಕೋರ್ಟ್ ಹಾಲ್ ಪ್ರವೇಶಿಸಿದರೆ ಜೈಲು ಖಚಿತ ➤ ಹೈಕೋರ್ಟ್‌ ಎಚ್ಚರಿಕೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.21. ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳು ವಿನಾಕಾರಣ ಹೈಕೋರ್ಟ್‌ ಕೋರ್ಟ್‌ ಹಾಲ್‌ ಪ್ರವೇಶಿಸಿದರೆ ಜೋಕೆ. ಏಕೆಂದರೆ ಹಾಗೆ ಪ್ರವೇಶಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ. ಹೀಗೊಂದು ಮೌಖಿಕ ಎಚ್ಚರಿಕೆ ನೀಡಿರುವ ಕೋರ್ಟ್‌ ವ್ಯಕ್ತಿಗಳು, ವಿಚಾರಣೆಗೆ ಸಂಬಂಧವಿಲ್ಲದೆ ಅನಗತ್ಯವಾಗಿ ಕೋರ್ಟ್ ಹಾಲ್‌ಗಳಲ್ಲಿ ಕಾಣಿಸಿಕೊಂಡರೆ ಅಂತಹವರನ್ನು ಬಂಧಿಸಿ ನೇರವಾಗಿ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದೆ.

ಸಚಿವ ಮುನಿರತ್ನ ವಿರುದ್ಧ ವಿಧಾನಪರಿಷತ್‌ ಸದಸ್ಯ ತುಳಸಿ ಮುನಿರಾಜು ಗೌಡ ದಾಖಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯ ವಿಚಾರಣೆ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ಈ ಎಚ್ಚರಿಕೆ ನೀಡಿದೆ. ನ್ಯಾಯಪೀಠದಲ್ಲಿ ಕಲಾಪದಲ್ಲಿ ಈ ಮೌಖಿಕ ಹೇಳಿಕೆ ನೀಡಿದ ನ್ಯಾಯಮೂರ್ತಿ, ‘ವಕೀಲರು, ಕಾನೂನು ವಿದ್ಯಾರ್ಥಿಗಳು, ಕೇಸಿಗೆ ಸಂಬಂಧಿಸಿದ ಕಕ್ಷಿದಾರರು, ಅಧಿಕಾರಿಗಳು ಹಾಗೂ ಸಕಾರಣ ಹೊಂದಿದ ವ್ಯಕ್ತಿಗಳಿಗೆ ಮಾತ್ರವೇ ಕೋರ್ಟ್‌ ಹಾಲ್‌ ಪ್ರವೇಶ ಇರುತ್ತದೆ’ ಎಂದರು.

Also Read  ರಾಜ್ಯದಲ್ಲಿ ಹೊಸ ಸೈಬರ್ ಭದ್ರತಾ ನೀತಿ ಜಾರಿ: ಸಚಿವ ಪ್ರಿಯಾಂಕ್ ಖರ್ಗೆ

 

 

error: Content is protected !!
Scroll to Top