ಬಂಟ್ವಾಳ: ಅಪರಿಚಿತ ಕಾರು ಪತ್ತೆ ! ➤ ಸ್ಯಾಂಟ್ರೋ ರವಿಯ ಕಾರು ಎಂಬ ಶಂಕೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜ.20. ಕಳೆದ ಕೆಲವು ದಿನಗಳಿಂದ ಇನೋವಾ ಕಾರೊಂದು ವಾರಿಸುದಾರರಿಲ್ಲದೆ ಬಿ.ಸಿರೋಡಿನಲ್ಲಿ ಅನಾಥವಾಗಿ ನಿಂತುಕೊಂಡಿತ್ತು, ಇದು ಸಾರ್ವಜನಿಕರಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಬಿ.ಸಿರೋಡಿನ ಫ್ಲೈ ಓವರ್ ನ ಅಡಿಭಾಗದಲ್ಲಿ ಕೆ.ಎಲ್. ದಾಖಲೆಯ ವಾಹನ ಅನಾಥ ರೀತಿಯಲ್ಲಿ ನಿಂತುಕೊಂಡಿತ್ತು. ಜನರು ಇದು ಸ್ಯಾಂಟ್ರೊ ರವಿಯ ಕಾರು ಎಂದು ಹೇಳಿಕೊಳ್ಳುತ್ತಿದ್ದರು.


ಆದರೆ ಕೇರಳ ಮೂಲದ ಸಬೀಬ್ ಅಶ್ರಫ್ ಎಂಬವರ ಹೆಸರಿನಲ್ಲಿ ಈ ಕಾರಿನ ದಾಖಲೆ ಇದೆ ಎಂದು ವರದಿ ತಿಳಿಸಿದೆ. ಇನ್ನು ಈ ಕಾರು ಕೇರಳ ಸರಕಾರದ ಆರ್.ಟಿ.ಒ.ಯಲ್ಲಿ ಬ್ಲ್ಯಾಕ್ ಲಿಸ್ಟ್ ನಲ್ಲಿದೆ ಎನ್ನಲಾಗಿದೆ. ಕಾರಿನ ಒಳ ಭಾಗದಲ್ಲಿ ಚೀಟಿ ಸಿಕ್ಕಿದೆ. ಅದರಲ್ಲಿ ಸಮೀರ್ ಎಂಬ ಹೆಸರಿನ ಮುಂದೆ ಫೋನ್ ನಂಬರ್ ಬರೆದಿದ್ದು, ಒನ್ಲಿ ವ್ಯಾಟ್ಸಪ್ ಕಾಲ್ ಎಂದು ಬರೆಯಲಾಗಿತ್ತು.

Also Read    ಚರಂಡಿಯಲ್ಲಿ ಪಲ್ಟಿಯಾದ ಮರಳು ತುಂಬಿದ್ದ ಟಿಪ್ಪರ್ ➤ ಬಾಲಕ ಸೇರಿ ಇಬ್ಬರು ಮೃತ್ಯು

error: Content is protected !!
Scroll to Top