(ನ್ಯೂಸ್ ಕಡಬ)newskadab.com ಮಂಗಳೂರು, ಜ.18. ರಾಜ್ಯ ಸರ್ಕಾರ 18 ವರ್ಷದವರಿಗೆ ಮದ್ಯ ಖರೀದಿಗೆ ಅನುಮತಿ ಕೊಡಲು ಚಿಂತಿಸುತ್ತಿದೆ. ಬಿಜೆಪಿ ಸರ್ಕಾರದ ಈ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ. ಇದು ಒಂದು ತಲೆಮಾರನ್ನು ನಾಶ ಮಾಡಲು ಹೊರಟಿರುವ ಕ್ರಮ. ಯುವ ಸಬಲೀಕರಣ, ಯುವಕರಿಗೆ ಉದ್ಯೋಗ ಕೊಡಲು ಇವರಿಗೆ ಆಗಿಲ್ಲ.ಈಗ ಯುವಕರನ್ನು ದುಷ್ಟಟಕ್ಕೆ ಪ್ರೇರೇಪಿಸುವ ಯೋಚನೆ ಸರ್ಕಾರ ಮಾಡ್ತಿದೆ. ಬಿಜೆಪಿ ಸರ್ಕಾರಕ್ಕೆ ಇದರ ಪರಿಣಾಮ ಗೊತ್ತಿಲ್ಲ, ಕೇವಲ ದುಡ್ಡು ಮಾಡಬೇಕು ಅಷ್ಟೇ. ಪೆಟ್ರೋಲ್, ಡಿಸೇಲ್ ಹೆಚ್ಚು ಮಾಡಿ ಅದರಿಂದ ಲೂಟಿ ಮಾಡುವುದು ಎಂದರು.
ಇದೀಗ ಯುವಕರು ಕುಡಿಯಿರಿ ಅಂತ ಹೇಳಿ ಇವರು ಸರ್ಕಾರ ನಡೆಸಬೇಕಾ ? ಸಮಾಜದಲ್ಲಿ ಆಗುವ ಕ್ರಿಮಿನಲ್ ಚಟುವಟಿಕೆಗಳು ಮದ್ಯಪಾನ ಮತ್ತು ಗಾಂಜಾದಿಂದ ಆಗುವುದು. ಮಂಗಳೂರಿನಲ್ಲಿ ಎಲ್ಲಾ ಕಡೆ ವಿಡಿಯೋ ಗೇಮ್, ಸ್ಕಿಲ್ ಗೇಮ್ ನಡೀತಾ ಇದೆ. ಮಕ್ಕಳು ಶಾಲೆಗೆ ಹೋಗುವ ಬದಲು ಸ್ಕಿಲ್ ಗೇಮ್ ಮಾಡ್ತಾ ಇದಾರೆ. ಬಿಜೆಪಿಯವರ ಈ ಕೆಲಸವನ್ನು ಯಾವ ತಾಯಿಯೂ ಸಹಿಸಲು ಸಾಧ್ಯವಿಲ್ಲ. ವೀರೇಂದ್ರ ಹೆಗ್ಗಡೆಯವರು ಮದ್ಯವರ್ಜನ ಶಿಬಿರ ಮಾಡ್ತಾ ಇದಾರೆ. ಆದರೆ ಅಧಿಕಾರದಲ್ಲಿ ಕೂತವರು ಜನರನ್ನು ನಶಿಸಲು ಕಾನೂನು ತರ್ತಾ ಇದಾರೆ. ತಕ್ಷಣ ಈ ಆಲೋಚನೆ ಕೈ ಬಿಟ್ಟು ನಿರ್ಧಾರ ವಾಪಾಸ್ ಪಡೆಯಬೇಕು ಎಂದು ತಿಳಿಸಿದರು.