ಗರ್ಭಿಣಿ ಪತ್ನಿಯನ್ನು ಕೊಂದು ಪರಾರಿಯಾದ ಪಾಪಿ ಗಂಡ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.17. ಶೀಲ ಶಂಕಿಸಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಮನೆಯಿಂದಲೇ ಪರಾರಿಯಾಗಿರುವ ಘಟನೆ ಬೆಂಗಳೂರಿನ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದೆ.  ತಾವರೆಕೆರೆಯ ಸುಭಾಷ್ ನಗರದ ನಿವಾಸಿ 22 ವರ್ಷದ ನಾಜ್ ಕೊಲೆಯಾದ ಮಹಿಳೆ. ನಾಜ್ 6 ತಿಂಗಳ ಹಿಂದಷ್ಟೇ ಖಾಸಗಿ ಕಂಪನಿ ಉದ್ಯೋಗಿ ನಾಸೀರ್ ಹುಸೇನ್ ಎಂಬುವವನನ್ನ ಪ್ರೀತಿಸಿ, ಪೋಷಕರ ಅನುಮತಿ ಪಡೆದು ಮದುವೆಯಾಗಿದ್ದಳು. ನಾಸೀರ್ ಹುಸೇನ್ ಗೆ ತಂದೆ ತಾಯಿ ಇರದ ಕಾರಣ ಮದುವೆಯ ಬಳಿಕ ತಾವರೆಕೆರೆಯ ಸುಭಾಷ್ ನಗರದ ಫ್ಲಾಟ್ ನಲ್ಲಿ ವಾಸವಿದ್ದರು.

Also Read  ಯುಎಎನ್ ಜೊತೆ ಆಧಾರ್‌ ಲಿಂಕ್‌ ಮಾಡಲು ಮಾರ್ಚ್15 ಲಾಸ್ಟ್ ಡೇಟ್

ಇತ್ತೀಚೆಗಷ್ಟೇ ನಾಜ್ ಗರ್ಭಿಣಿಯಾಗಿದ್ದರು. ಹೆಂಡತಿ ಗರ್ಭಿಣಿಯಾಗಿರೋದು ಖಚಿತವಾಗ್ತಿದ್ದಂತೆ ಹೆಂಡತಿ ಮೇಲೆ ನಾಸೀರ್ ಸಂದೇಹಪಡಲು ಶುರು ಮಾಡಿದ್ದ. ಅದು ತನ್ನ ಮಗುವಲ್ಲ ಎಂದು ಕಿರಿಕ್ ತೆಗೆದ ಗರ್ಭಿಣಿ ಪತ್ನಿಯೊಂದಿಗೆ ಜಗಳವಾಡಿದ್ದ, ಜಗಳ ವಿಕೋಪಕ್ಕೆ ಹೋಗಿ ಹೆಂಡತಿ ಕೊಲೆಗೈದು ನಾಸೀರ್ ಪರಾರಿ ಆಗಿದ್ದಾನೆ.

 

 

error: Content is protected !!
Scroll to Top