(ನ್ಯೂಸ್ ಕಡಬ)newskadaba.com ಮೈಸೂರು, ಜ.17. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಎದುರಿಸುತ್ತಿರುವ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಸ್ಯಾಂಟ್ರೊ ರವಿ ಪತ್ನಿ ಎನ್ನಲಾದ ಮಹಿಳೆ ದೇವರಾಜ ಠಾಣೆಯಲ್ಲಿ ತನ್ನ ಚೆಕ್ ಬುಕ್‌ನ್ನು ಸ್ಯಾಂಟ್ರೋ ರವಿ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
ಮಹಿಳೆ ದೇವರಾಜ ಮಾರ್ಕೆಟ್‌ಗೆ ಹೋಗಿದ್ದು, ಮಹಿಳೆ ಸ್ಕೂಟರ್ ಡಿಕ್ಕಿಯಲ್ಲಿ ಸಹಿ ಇರುವ ಎರಡು ಚೆಕ್ ಬುಕ್ ಇಟ್ಟಿದ್ದರು. ಸ್ಯಾಂಟ್ರೊ ರವಿ ಮತ್ತು ಪ್ರಕಾಶ್ ಸ್ಕೂಟರ್ ಡಿಕ್ಕಿ ಓಪನ್ ಮಾಡಿ ಚೆಕ್ ಬುಕ್‌ಗಳನ್ನು ಕಳವು ಮಾಡಿದ್ದಾರೆ. ನಂತರ 2 ಚೆಕ್‌ಗಳನ್ನು ಬ್ಯಾಂಕ್‌ಗೆ ನೀಡಿದ್ದಾರೆ. ಇನ್ನೂ ಅವರ ಬಳಿ 2 ಚೆಕ್‌ಗಳು ಇವೆ. ಈ ಸಂಬಂಧ ದೇವರಾಜ ಠಾಣೆಗೆ ನಾನು (ಮಹಿಳೆ) ದೂರು ನೀಡಿದ್ದೇನೆ ಎಂದು ವಂಚನೆಗೊಳಾದ ಮಹಿಳೆ ಮಾಹಿತಿ ನೀಡಿದ್ದಾಳೆ. ಸದ್ಯ ಸ್ಯಾಂಟ್ರೊ ರವಿ ವಿರುದ್ಧ ಐಪಿಸಿ ಸೆಕ್ಷನ್ 465, 467, 506, 420 ಹಾಗೂ ಸೆಕ್ಷನ್ 34ರ ಅಡಿ ಪ್ರಕರಣ ದಾಖಲಾಗಿದೆ.
ಸ್ಯಾಂಟ್ರೋ ರವಿ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಸಿಐಡಿ ಅಧಿಕಾರಿಗಳಿಗೆ ದಾಖಲೆ ಪತ್ರಗಳನ್ನು ವರ್ಗಾಯಿಸಿದ್ದೇವೆ. ಸರ್ಕಾರದ ಆದೇಶದಂತೆ ಸಿಐಡಿ ಅಧಿಕಾರಿಗಳು ಬಂದಿದ್ದು ಅವರಿಗೆ ದಾಖಲೆ ಹಸ್ತಾಂತರಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.