ಸುಳ್ಯ: ನಾಪತ್ತೆಯಾಗಿದ್ದ ಯುವಕ ಕಾಸರಗೋಡಿನಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com  ಸುಳ್ಯ, ಜ.16. ಸುಳ್ಯದಿಂದ ನಾಪತ್ತೆಯಾಗಿದ್ದ ಯುವಕನನ್ನು ಸುಳ್ಯ ಪೊಲೀಸರು ಕಾಸರಗೋಡಿನಲ್ಲಿ ಪತ್ತೆ ಹಚ್ಚಿ ಠಾಣೆಗೆ ಹಾಜರು ಪಡಿಸಿ ಬಳಿಕ ಮನೆಯವರೊಂದಿಗೆ ಕಳುಹಿಸಿದ ಘಟನೆ ಸುಳ್ಯದಲ್ಲಿ ವರದಿಯಾಗಿದೆ.

ಸುಳ್ಯ ಕೆವಿಜಿ ಬಳಿ ಫುಡ್ ಪಾಯಿಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕಿನ ವಾಮಪದವು ನಿವಾಸಿ ನಾಗೇಶ್ (33) ಕ್ಯಾಂಟೀನ್ ನಲ್ಲಿ ಊಟ ಮುಗಿಸಿ ರೂಮಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಮತ್ತೆ ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಕಳೆದ ಒಂದು ತಿಂಗಳ ಹಿಂದೆ ಆತನ ಪತ್ನಿ ಗೀತಾ ಎಂಬುವವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎನ್ನಲಾಗಿದೆ.

Also Read  ನಾಡಹಬ್ಬ ದಸರಾ ಆಚರಣೆಗೆ ಹೆಚ್ಚಿದ ಒತ್ತಡ: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ

ಅವರು ತಂಗಿದ್ದ ರೂಮಿನಿಂದ ಪೇಟೆಗೆ ಹೋದವರು ಮರಳಿ ಬಾರದೆ ಕಾಣೆಯಾಗಿದ್ದರು. ಸಂಬಂಧಪಟ್ಟವರಲ್ಲಿ ಮತ್ತು ಕುಟುಂಬಸ್ಥರಿಗೆ ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ. ಇದರಿಂದ ನನ್ನ ಪತಿಯನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎಂದು ವರದಿ ತಿಳಿಸಿದೆ.

 

error: Content is protected !!