ದೇವಸ್ಥಾನ ಧ್ವಂಸ-ಬಿಸಾಡಿದ್ದ ಶ್ರೀರಾಮನ ವಿಗ್ರಹ ನದಿಯಲ್ಲಿ ಪತ್ತೆ        

(ನ್ಯೂಸ್ ಕಡಬ) newskadaba.com   ಚಿತ್ರದುರ್ಗ, ಜ.14. ಇತಿಹಾಸ ಹೊಂದಿರುವ ಶ್ರೀರಾಮನ ದೇವಸ್ಥಾನವನ್ನು ಧ್ವಂಸಗೊಳಿಸಿ, ನದಿಗೆ ಎಸೆದಿದ್ದ ವಿಗ್ರಹ ಇದೀಗ ವೇದಾವತಿಯ ಕೂಡ್ಲಹಳ್ಳಿ ಸಂಗಮೇಶ್ವರ ದೇವಸ್ಥಾನದ ಬಳಿ ಪತ್ತೆಯಾಗಿದೆ.


ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಜಮೀನಿನಲ್ಲಿ ನೂರಾರು ವರ್ಷ ಹಳೆಯ ಶ್ರೀರಾಮನ ದೇವಸ್ಥಾನವಿತ್ತು. ದೇವಾಲಯ ಇರುವ ಜಮೀನನ್ನು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಖರೀದಿಸಿದ್ದರು. ಆದರೆ ಜಮೀನು ಮಾಲೀಕ ಕಳೆದ ವರ್ಷ ನವೆಂಬರ್ 17ರಂದು ದೇವಸ್ಥಾನವನ್ನು ರಾತ್ರೋರಾತ್ರಿ ನೆಲಸಮ ಮಾಡಿ, ದೇವರ ವಿಗ್ರಹವನ್ನು ವೇದಾವತಿ ನದಿಯಲ್ಲಿ ಬಿಸಾಡಿದ್ದ ಘಟನೆ ನಡೆದಿತ್ತು. ಈ ಘಟನೆಗೆ ಜಮೀನು ಮಾಲೀಕನ ವಿರುದ್ಧ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು  ಎನ್ನಲಾಗಿದೆ.

Also Read  ಇಂದಿನಿಂದ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ

 

error: Content is protected !!
Scroll to Top