ಆಟವಾಡುವಾಗ ಮೂಗಿಗೆ ರಬ್ಬರ್ ಹಾಕಿದ 10 ವರ್ಷದ ಬಾಲಕಿ…!! ➤ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು

(ನ್ಯೂಸ್ ಕಡಬ) newskadaba.com   ಗುಜರಾತ್​, ಜ.14. 10 ವರ್ಷದ ಬಾಲಕಿ ಆಟವಾಡುವಾಗ ತನ್ನ ಮೂಗಿಗೆ ರಬ್ಬರ್ ತುಂಡು ಹಾಕಿಕೊಂಡಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ರಾಜ್​ಕೋಟ್​ನಲ್ಲಿ ಶಿವಾನಿ ತ್ರಿವೇದಿ ಎಂಬ ಮಗು ಆಟವಾಡುವಾಗ ಮೂಗಿಗೆ ರಬ್ಬರ್ ತುಂಡು ಹಾಕಿಕೊಂಡಿದ್ದು,  ಬಾಲಕಿ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗಿದ್ದು, ಸ್ವಲ್ಪ ದಿನಗಳ ನಂತರ ಮೂಗಿನಿಂದ ದುರ್ವಾಸನೆಯ ದ್ರವ ಮತ್ತು ರಕ್ತ ಹೊರಬರಲು ಪ್ರಾರಂಭಿಸಿದೆ.

ಈ ವೇಳೆ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷೆ ನಡೆಸಿದಾಗ ಮೂಗಿನಲ್ಲಿ ಏನೋ ಅಂಟಿಕೊಂಡಿರುವುದು ಕಂಡು ಬಂದಿತ್ತು. ಬಳಿಕ ಮೂಗಿನ ಒಳಗಿನ ಚರ್ಮದಲ್ಲಿ ಸಿಲುಕಿಕೊಂಡಿದ್ದ ವಸ್ತುವನ್ನು ಬೈನಾಕ್ಯುಲರ್‌ಗಳಿಂದ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊರ ತೆಗೆಯಲಾಗಿದೆ.

Also Read  ತಲೆ, ಕೈಕಾಲು ಕತ್ತರಿಸಿ ಯುವತಿಯ ಬರ್ಬರ ಹತ್ಯೆ

 

error: Content is protected !!
Scroll to Top