ಅಣ್ಣಾಮಲೈ ಅವರಿಗೆ ‘ಝೆಡ್’ ಶ್ರೇಣಿ ಭದ್ರತೆ

(ನ್ಯೂಸ್ ಕಡಬ) newskadaba.com ತಮಿಳುನಾಡು, ಜ. 13. ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಗೃಹ ಸಚಿವಾಲಯ ಅಣ್ಣಾಮಲೈ ಅವರಿಗೆ ಝಡ್ ಶ್ರೇಣಿಯ ಭದ್ರತೆಯನ್ನು ನೀಡಿದೆ.

ಅಣ್ಣಾಮಲೈ ಅವರಿಗೆ ಈ ಹಿಂದೆ ವೈ ಕೆಟಗರಿ ಭದ್ರತೆ ನೀಡಲಾತ್ತು. ಅವರಿಗೆ ಅಪಾಯ ಹೆಚ್ಚಾಗುವ ಆತಂಕದ ಹಿನ್ನೆಲೆ ಅವರಿಗೆ ಸಿಆರ್​ಎಫ್‌ನ ಒಟ್ಟು 33 ಕಮಾಂಡೋಗಳು ಈ ಭದ್ರತೆಯನ್ನು ನೀಡಲಿದ್ದಾರೆ ಎನ್ನಲಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರವರಿಗೆ ಮಾವೋವಾದಿಗಳು ಮತ್ತು ಧಾರ್ಮಿಕ ಉಗ್ರಗಾಮಿಗಳಿಂದ ಬೆದರಿಕೆ ಹೆಚ್ಚುತ್ತಿದೆ ಎಂದು ಹೇಳಲಾಗಿದೆ. ಈ ಕುರಿತು ಐಬಿ ಬೆದರಿಕೆ ವರದಿ ಬಂದ ನಂತರ ಅಣ್ಣಾಮಲೈ ಅವರಿಗೆ ಝೆಡ್ ಕೆಟಗರಿ ಭದ್ರತೆ ಒದಗಿಸಲಾಗಿದೆ.

Also Read  ಮತ್ತೆ ಭಾರತಕ್ಕೆ ಬಂದ 12 ಚೀತಾಗಳು       ➤ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು

 

error: Content is protected !!
Scroll to Top