ಶಿವಮೊಗ್ಗ ಅಕ್ರಮ ಕಸಾಯಿಖಾನೆ ➤7 ಹಸುಗಳ ಬರ್ಬರ ಹತ್ಯೆ!

(ನ್ಯೂಸ್ ಕಡಬ) newskadaba.com, ಶಿವಮೊಗ್ಗ, ಜ. 13.ಅಕ್ರಮ ಕಸಾಯಿಖಾನೆಯಲ್ಲಿ ಏಳು ಹಸುಗಳ ಕತ್ತುಕೊಯ್ದು ಹತ್ಯೆ ನಡೆಸಿದ ಘಟನೆ ಶಿವಮೊಗ್ಗ ಹೊರವಲಯದ ಸೂಳೇಬೈಲಿನಲ್ಲಿ ನಡೆದಿದೆ.

ಸೂಳೆಬೈಲಿನ ಅಜೀಜ್ ಎಂಬುವರ ಮನೆಯಲ್ಲಿ ಮಾಂಸಕ್ಕಾಗಿ ಗೋವುಗಳ ಹತ್ಯೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಠಾಣೆ ಪಿಐ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ದಾಳಿ ಮಾಡಿದ್ದಾರೆ. ಈ ವೇಳೆ ಏಳು ಹಸುಗಳನ್ನು ಪಾಪಿಗಳು ಕೊಂದಿದ್ದಾರೆ.

ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಅಜೀಜ್, ಬಾಬು, ಅಬ್ದುಲ್ ಸತ್ತರ್ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಕಸಾಯಿಖಾನೆಯಲ್ಲಿದ್ದ ಉಳಿದ 10 ಹಸುಗಳನ್ನು ರಕ್ಷಣೆ ಮಾಡಿದ್ದಾರೆ.

error: Content is protected !!

Join the Group

Join WhatsApp Group