ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 62 ಮಕ್ಕಳು ನಾಪತ್ತೆ..!

Crime

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.11. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ತಿಂಗಳು ಕನಿಷ್ಠ ಐದು ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಮಕ್ಕಳ ಕಲ್ಯಾಣ ಸಮಿತಿಯ ಮಾಹಿತಿಯ ಪ್ರಕಾರ 2022ರಲ್ಲಿ 33 ಹುಡುಗಿಯರು ಸೇರಿದಂತೆ ಒಟ್ಟು 62 ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 60 ಮಂದಿಯನ್ನು ಪೊಲೀಸರು ಗುರುತಿಸಿದ್ದು, ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಮಾಹಿತಿ ಸಂಗ್ರಹಿಸಲಾಗಿದೆ.

 


ಬಾಲಾಪರಾಧಿ ನ್ಯಾಯ ಮಂಡಳಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕಾಣೆಯಾಗಲು ಹಲವು ಕಾರಣಗಳಿವೆ. ಆದಾಗ್ಯೂ ಅವರನ್ನು ಕೆಲವೇ ದಿನಗಳು ಅಥವಾ ವಾರಗಳಲ್ಲಿ ಪತ್ತೆ ಹಚ್ಚಲಾಗುತ್ತದೆ ಮತ್ತು ಮನೆಗೆ ಆ ಮಕ್ಕಳನ್ನ ಹಿಂತಿರುಗಿಸುವ ಪ್ರಯತ್ನ ಮಾಡಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಣೆಯಾದ ಹೆಚ್ಚಿನ ಪ್ರಕರಣಗಳು ಲವ್‌ ಮಾಡಿ ಓಡಿ ಹೋದ ಸಂಬಂಧಗಳಿಗೆ ಸಂಬಂಧಿಸಿವೆ. 16 ರಿಂದ 18 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಕಾಣೆಯಾಗುತ್ತಾರೆ. ಅವರು ಪ್ರೀತಿ ಸಂಬಂಧಗಳಲ್ಲಿರುತ್ತಾರೆ ಮತ್ತು ತಮ್ಮ ಸಂಗಾತಿಯಿಂದ ಬಲವಂತವಾಗಿ ಓಡಿ ಹೋಗುತ್ತಾರೆ. ಆದರೆ, ಕೆಲ ದಿನಗಳ ನಂತರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನುತ್ತಾರೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ ತಿಳಿಸಿದ್ದಾರೆ.

Also Read  ವಾಹನಗಳ ಇನ್ಶುರೆನ್ಸ್ ಅವಧಿ ಮೀರಿದ್ದರೂ ಉಚಿತ ಪರಿಶೀಲನಾ ಕೇಂದ್ರ ➤ ಅನುಗ್ರಹ ಅಸೋಸಿಯೇಟ್ಸ್ ನೂತನ ಕಛೇರಿ ಕಡಬದಲ್ಲಿ ಉದ್ಘಾಟನೆ

 

error: Content is protected !!
Scroll to Top