ಸಿಎ ಪರೀಕ್ಷೆಯ ಫಲಿತಾಂಶ ಪ್ರಕಟ ಮಂಗಳೂರಿನ ರಮ್ಯಶ್ರೀ ದೇಶಕ್ಕೆ 2ನೇ ರ‍್ಯಾಂಕ್‌

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 11. ‘ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ’ ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಮಂಗಳೂರಿನ ರಮ್ಯಶ್ರೀ ದೇಶಕ್ಕೆ ಎರಡನೇ ರ‍್ಯಾಂಕ್‌ಗಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸಿಎ ಇಂಟರ್‌ ಮೀಡಿಯೇಟ್‌ ಮತ್ತು ಅಂತಿಮ ಪರೀಕ್ಷೆ ನಡೆದಿತ್ತು. ಸಿಎ ಅಂತಿಮ ಪರೀಕ್ಷೆಯಲ್ಲಿ ದೆಹಲಿಯ ಹರ್ಷ ಚೌಧರಿ ಮೊದಲ ರ‍್ಯಾಂಕ್‌ ಗಳಿಸಿದ್ದು,ರಮ್ಯಶ್ರೀ ಮತ್ತು ಇಂದೋರ್‌ನ ಶಿಖಾ ಜೈನ್‌ ಜಂಟಿಯಾಗಿ 2ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ದೆಹಲಿಯ ಮಾನ್ಸಿ ಅಗರವಾಲ್‌ 3ನೇ ರ‍್ಯಾಂಕ್‌ ಪಡೆದಿದ್ದಾರೆ. ಇನ್ನು ಸಿಎ ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ದೀಕ್ಷಾ ಗೋಯಲ್‌ ಮೊದಲ ರ‍್ಯಾಂಕ್‌ಗಳಿಸಿದ್ದಾರೆ. ತುಲಿಕಾ ಶ್ರವಣ್‌ ಜಲನ್‌ ಮತ್ತು ಸಕ್ಷಮ್‌ ಜೈನ್‌ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Also Read  ಮಹಾರಾಷ್ಟದಿಂದ ಕಡಬಕ್ಕೆ ಬಂದ ಯುವಕ ➤ ಸರ್ಕಾರಿ ಶಾಲೆಯಲ್ಲಿ ಕ್ವಾರೈಂಟೈನ್

error: Content is protected !!
Scroll to Top