ಬೆಂಗಳೂರು: ಪ್ರಮುಖ ರಸ್ತೆಗಳಲ್ಲಿ ‘ಮೆಕ್ಯಾನಿಕಲ್ ಸ್ವೀಪರ್‌’ ಬಳಕೆಗೆ ಬಿಬಿಎಂಪಿ ಸಜ್ಜು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.11.  ನಗರದ ಏರ್‌ಪೋರ್ಟ್‌ ರಸ್ತೆ ಹಾಗೂ ಇತರೆ ಅಧಿಕ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಮೆಕ್ಯಾನಿಕಲ್ ಸ್ವೀಪರ್‌’ಗಳ ಬಳಕೆ ಮಾಡಲು ಬಿಬಿಎಂಪಿ ಸಜ್ಜಾಗಿದೆ ಎಂದು ತಿಳಿದುಬಂದಿದೆ.

ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರಲಿದ್ದು, ಇಂತರ ರಸ್ತೆಗಳಲ್ಲಿ ಅಪಘಾತ ಸಂಖ್ಯೆ ಕೂಡ ಹೆಚ್ಚಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ರಕ್ಷಣೆ ಮಾಡಲು ಮುಂದಾಗಿರುವ ಬಿಬಿಎಂಪಿ, ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ನಿಯೋಜಿಸಲು ಮುಂದಾಗಿದೆ ಎನ್ನಲಾಗಿದೆ.

ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಮಾತನಾಡಿ, ಸುಲಭವಾಗಿ ನಿಯಂತ್ರಿಸಬಲ್ಲ ಯಂತ್ರಗಳು ಇದಾಗಿದ್ದು, ಇದರ ತೂಕ 30 ಕೆಜಿ ಇರಲಿದೆ. ಯಂತ್ರದ ಕೆಳಭಾಗದಲ್ಲಿ ಟ್ರಾಲಿ ಮಾದರಿ ಚಕ್ರಗಳನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ ಯಂತ್ರವನ್ನು ಸ್ಟಾರ್ಟ್‌ ಮಾಡಿದ ಕೂಡಲೇ ತನ್ನಿಂದ ತಾನೇ ರಸ್ತೆಯಲ್ಲಿ ಸಾಗಲಿದೆ. ಅದರಿಂದ ಪೌರಕಾರ್ಮಿಕರು ಯಂತ್ರವನ್ನು ವಾರ್ಡ್‌ ಕಚೇರಿಗೆ ತರುವುದು ಮತ್ತು ತೆಗೆದುಕೊಂಡು ಹೋಗುವುದು ಸುಲಭವಾಗಲಿದೆ. ಯಂತ್ರಗಳ ಬಳಕೆಗೆ ಪೌರಕಾರ್ಮಿಕರಿಗೆ ತರಬೇತಿಯನ್ನೂ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Also Read  ಶುಭ ಸಮಾರಂಭ ನಡೆಸುವ ಕುಟುಂಬಗಳಿಗೆ ಹೊಸ ತಲೆನೋವು   ➤ ಚುನಾವಣೆ ಎಫೆಕ್ಟ್‌: ಮೇ 10,13ಕ್ಕೆ ನಿಗದಿಯಾಗಿದ್ದ  ಸಮಾರಂಭಗಳು ಕ್ಯಾನ್ಸಲ್‌ʼ..!!*  

 

 

error: Content is protected !!
Scroll to Top