(ನ್ಯೂಸ್ ಕಡಬ)newskadaba.com ಜಮ್ಮು ಕಾಶ್ಮೀರ, ಜ.09. ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ದಾಂಗ್ರಿ ಹಳ್ಳಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದ ದಾಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಸುಮಾರು 50 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಗ್ರರ ದಾಳಿಯಲ್ಲಿ ಏಳು ಮಂದಿ ಮೃತಪಟ್ಟು, 14 ಮಂದಿ ಗಾಯಗೊಂಡಿದ್ದರು.
ಈ ದಾಳಿ ನಡೆದ ಸ್ಥಳೀಯ ಸ್ವಯಂ ಸೇವಕರನ್ನೊಳಗೊಂಡ ಹಳ್ಳಿಯ ರಕ್ಷಣಾ ಗಾರ್ಡ್ ನ್ನು ಆಡಳಿತ ಬಲಗೊಳಿಸಿತ್ತು. ಸಂಭಾವ್ಯ ಒಳನುಸುಳುವಿಕೆ ಮಾರ್ಗಗಳ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಬರುವ ಉಗ್ರರ ಬಗ್ಗೆ ಸುಳಿವು ನೀಡುವವರಿಗೆ ರೂ.10 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.