ಮೀನು ಹಿಡಿಯಲು ಹೋದಾಗ ಅಪರಿಚಿತರು ಹಾರಿಸಿದ ಗುಂಡು ತಗುಲಿ ಯುವಕ ಮೃತ್ಯು..!!

(ನ್ಯೂಸ್ ಕಡಬ) newskadaba.com ಹಾಸನ, ಜ.10.  ಮೀನು ಹಿಡಿಯಲು ಹೋಗಿದ್ದ ವೇಳೆ ಅಪರಿಚಿತರು ಹಾರಿಸಿದ ಗುಂಡಿಗೆ ಯುವಕನೋರ್ವ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಸಪುರ ತಾಲೂಕಿನ ಯಸಳೂರು ಹೋಳಿಬಳಿ ತಂಬಲಗೇರಿಯ ಬಳಿ ವರದಿಯಾಗಿದೆ.

ಮೃತ ಯುವಕನನ್ನು ತಂಬಲಗೇರಿಯ ನವೀನ್ ಉರ್ಫ್ ಪಚ್ಚಿ (39) ಎಂದು ಗುರುತಿಸಲಾಗಿದೆ.

ನಾಲ್ವರು ಸ್ನೇಹಿತರ ಜೊತೆಗೂಡಿ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಇದೇ ವೇಳೆ ಅಪರಿಚಿತರು ಹಾರಿಸಿದ ಗುಂಡು ತಗುಲಿ ನವೀನ್ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಮೃತರ ಜೊತೆಯಿದ್ದ ದಯಾನಂದ ಹಾಗೂ ಪದ್ಮನಾಭ  ಎಂಬುವವರಿಗೂ ಗಂಡು ತಗುಲಿದ್ದು, ಮತ್ತೊಬ್ಬ ಯುವಕ ರಾಜಾಚಾರಿಗೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಗುಂಡು ತಗುಲಿದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮೃತ ನವೀನ್ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ರಾಷ್ಟ್ರೀಯ ಸ್ವಯಂಸೇವಕನಾಗಿಯೂ ಸಂಘದಲ್ಲಿ ಗುರುತಿಸಿಕೊಂಡಿದ್ದರು. ಒಂದು ವರ್ಷದ ಹಿಂದೆ ನವೀನ್ ಅವರ ತಂದೆ ತೀರಿಕೊಂಡಿದ್ದು, ಅವರಿಗೆ ಪತ್ನಿ ಹಾಗೂ ನಾಲ್ಕು ವರ್ಷದ ಮಗು ಇದೆ ಎಂದು ತಿಳಿದು ಬಂದಿದೆ.

Also Read  ”ಜಾತ್ಯತೀತ” ಎಂದಿರುವಾಗ “ಜಾತಿಗಣತಿ” ಯ ಅಗತ್ಯವೇನಿದೆ? : ಪೇಜಾವರ

 

error: Content is protected !!
Scroll to Top