ಉಪ್ಪಿನಂಗಡಿ: ಬೈಕ್‌ಗಳ ಅಪಘಾತ ಪ್ರಕರಣ ➤  ತ್ರಿಬಲ್ ರೈಡ್ ಸವಾರನಿಗೆ 1 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟ..!!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 10.  ಉಪ್ಪಿನಂಗಡಿಯಲ್ಲಿ ಐದು ವರ್ಷಗಳ ಹಿಂದೆ  ನಡೆದ ಬೈಕ್‌ಗಳೆರಡರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿ ತ್ರಿಬಲ್ ರೈಡ್ ಬೈಕ್ ಸವಾರ ಉಪ್ಪಿನಂಗಡಿ ರಾಮನಗರದ  ಮಹಮ್ಮದ್ ಶೌಪಾನ್ ಅವರಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ  ವಿಧಿಸಿ ತೀರ್ಪು ನೀಡಿದೆ ವರದಿ ಪ್ರಕಟನೆ ತಿಳಿಸಿದೆ.

2017ರ ಜ.2ರಂದು ರಾತ್ರಿ ಉಪ್ಪಿನಂಗಡಿಯ ಪದ್ಮವಿದ್ಯಾ ಪೆಟ್ರೋಲ್ ಪಂಪ್ ಬಳಿ ಉಪ್ಪಿನಂಗಡಿ ರಾಮನಗರ ನಿವಾಸಿ ಮಹಮ್ಮದ್ ಶೌಪನ್ ಎಂಬವರು  ಮಹಮ್ಮದ್ ಅಜೀಜ್, ಮಹಮ್ಮದ್ ಇರ್ಫಾನ್ ಎಂಬವರನ್ನು ಕುಳ್ಳಿರಿಸಿಕೊಂಡು ತ್ರಿಬಲ್ ರೈಡ್ ಮಾಡಿಕೊಂಡು ಬೈಕ್‌ ನಲ್ಲಿ ಸವಾರಿ ಮಾಡುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಉರುವಾಲು ಗ್ರಾಮದ ರಂಜಿತ್ ಎಂಬವರು ಚಲಾಯಿಸುತ್ತಿದ್ದ ಬೈಕ್(ಕೆ.ಎ 21 ಡಬ್ಲೂ 3108)ನಡುವೆ ಢಿಕ್ಕಿ ಸಂಭವಿಸಿತ್ತು. ಢಿಕ್ಕಿಯ ರಭಸಕ್ಕೆ ಮಹಮ್ಮದ್ ಶೌಪಾನ್ ಎಂಬವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು , ಬೈಕ್‌ನಲ್ಲಿದ್ದ ನೆಕ್ಕಿಲಾಡಿ ಗ್ರಾಮದ ಮಹಮ್ಮದ್ ಅಜೀಜ್(20ವ)ರವರು ಸ್ಥಳದಲ್ಲೇ ಮೃತಪಟ್ಟಿದ್ದರು .ಬೈಕ್‌ನಲ್ಲಿದ್ದ ಇತರರು ಗಾಯಗೊಂಡಿದ್ದರು. ಇನ್ನೊಂದು ಬೈಕ್ ಸವಾರ ರಂಜಿತ್‌ರವರು ನೀಡಿದ ದೂರಿನ ಮೇರೆಗೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆಗಿನ ಇನ್‌ಸ್ಪೆಕ್ಟರ್ ಮಹೇಶ್‌ಪ್ರಸಾದ್ ಅವರು ತನಿಖಾಧಿಕಾರಿಯಾಗಿ ಮತ್ತು ಹೆಡ್‌ಕಾನ್‌ಸ್ಟೇಬಲ್ ಸತೀಶ್ ಅವರು ಸಹಾಯಕ ತನಿಖಾಧಿಕಾರಿಯಾಗಿದ್ದು,  ಆರೋಪಿ ತ್ರಿಬೈಲ್ ರೈಡ್ ಸವಾರನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರು ಜೆ.ಎಮ್.ಎ‌ಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಗೌಡ ಆರ್.ಪಿ ಅವರು ಆರೋಪಿಗೆ   1 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Also Read  ಮೋದಿ ಅಲೆಗೆ ಕೊಚ್ಚಿ ಹೋದ ಕಾಂಗ್ರೆಸ್ ► ಕರಾವಳಿಯಲ್ಲಿ 7 ಕ್ಷೇತ್ರದಲ್ಲಿ ವಿಜಯದ ಪತಾಕೆ ಹಾರಿಸಿದ ಬಿಜೆಪಿ, 1 ಕ್ಷೇತ್ರಕ್ಕೆ ತೃಪ್ತಿಪಟ್ಟ ಕಾಂಗ್ರೆಸ್

 

 

error: Content is protected !!
Scroll to Top