(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕೆಲವು ಸ್ವಪಕ್ಷೀಯರ ವಿರೋಧದ ನಡುವೆಯೂ ಫರಂಗಿಪೇಟೆಯಿಂದ ಆರಂಭವಾದ ‘ಸಾಮರಸ್ಯದ ನಡಿಗೆ’ ಕೆಲದೂರ ಕ್ರಮಿಸುವುದಕ್ಕೆ ಮೊದಲೇ ಫರಂಗಿಪೇಟೆಯಲ್ಲಿ ರಾಜಹಂಸ ಸೇರಿದಂತೆ ಕೆಎಸ್ಸಾರ್ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ದುಷ್ಕರ್ಮಿಗಳು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪ್ರಯಾಣಿಕರಿಗೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಯಲಿರುವ ಸಾಮರಸ್ಯದ ನಡಿಗೆಗೆ ಪೂರ್ವದಲ್ಲೇ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು ಜಾಥಾಕ್ಕೆ ಆರಂಭದಲ್ಲೇ ವಿಘ್ನವನ್ನುಂಟು ಮಾಡಲು ಯತ್ನಿಸಿದ್ದಾರೆ. ಕಲ್ಲಡ್ಕ ಮಾರ್ಗವಾಗಿ ಸಾಗಲಿರುವ ಜಾಥಾಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಸೇರಿದಂತೆ ಸಿಪಿಎಂ ಮುಖಂಡರು ಸಾಥ್ ನೀಡಲಿದ್ದಾರೆ. ಜಾಥಾದ ಹಿನ್ನೆಲೆಯಲ್ಲಿ 300 ಕೆ.ಎಸ್.ಆರ್.ಪಿ. ಸೇರಿದಂತೆ 1000ಕ್ಕೂ ಅಧಿಕ ಪೊಲೀಸರ ಭದ್ರತೆ ಒದಗಿಸಲಾಗಿದೆ.