ಉಡುಪಿ: ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ ➤ ಇಬ್ಬರು ಆರೋಪಿಗಳು ಪರಾರಿ

Crime

(ನ್ಯೂಸ್ ಕಡಬ)newskadaba.com ಕಾಪು, ಜ.09. ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿನ ಅಕ್ರಮ ಕಸಾಯಿ ಖಾನೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿಗೆ ತಲುಪಿ ಅಲ್ಲಿನ ಫ್ಯಾಕ್ಟರಿಯ ಸಮೀಪ ಮರೆಯಲ್ಲಿ ನಿಂತು ನೋಡಿದಾಗಿ ಹಿಂಭಾಗದ ಹಾದಿಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ದನದ ಮಾಂಸವನ್ನು ಕಟಾವು ಮಾಡುತ್ತಿರುವುದು ಕಮಡುಬಂದಿದೆ ಎನ್ನಲಾಗಿದೆ. ಈ ವೇಳೆ ಮೊಹಮ್ಮದ್ ಆರೀಫ್ ಹಾಗೂ ಇನ್ನೋರ್ವ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಸುಮಾರು 200 ಕೆ.ಜಿ ಯಷ್ಟು ದನದ ಮಾಂಸ, ಮಾರಕಾಯುಧ, ಇತರ ಸ್ವತ್ತು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

 

error: Content is protected !!
Scroll to Top