ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ➤ ಮಹೇಶ್ ಜೋಷಿ

(ನ್ಯೂಸ್ ಕಡಬ) newskadaba.com  ಹಾವೇರಿ, ಜ.08. ಮುಂದಿನ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಜಿಲ್ಲೆಯಲ್ಲಿ ನಡೆಯಲಿದೆ. 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ದಿನ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ನಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ಈ ವಿಷಯ ತಿಳಿಸಿದ್ದು, ಮುಂದಿನ 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬ ಬಗ್ಗೆ ಚರ್ಚೆ ಆಯ್ತು. ಬೆಂ.ಗ್ರಾಮಾಂತರ, ಬೆಳಗಾವಿ , ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಸೇರಿದಂತೆ ಒಟ್ಟು 9 ಜಿಲ್ಲೆಗಳು ಸಾಹಿತ್ಯ ಸಮ್ಮೇಳನ ನಡೆಸುವ ಬೇಡಿಕೆ ಇಟ್ಟಿದ್ದವು ಎನ್ನಲಾಗಿದೆ.

ಒಟ್ಟು 46 ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದರು. 17 ಮತಗಳು ಮಂಡ್ಯ ಜಿಲ್ಲೆಗೆ ಬಂತು. ಬಳ್ಳಾರಿ ಜಿಲ್ಲೆಗೆ 16 ಮತಗಳು ಬಂದವು. ಉತ್ತರ ಕನ್ನಡ ಜಿಲ್ಲೆಗೆ ಒಂದೂ ಮತ ಬರಲಿಲ್ಲ. ಅತಿ ಹೆಚ್ಚು ಮತ ಪಡೆದ ಮಂಡ್ಯ ಜಿಲ್ಲೆಯಲ್ಲಿ ಮುಂದಿನ ಅಖಿಲ ಭಾರತ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ಮಂಡ್ಯ ಜಿಲ್ಲೆಯಲ್ಲಿ ಮುಂದಿನ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧಾರ ಮಾಡಲಾಗಿದ್ದು, ಉಳಿದ ಕೆಲವು ಅಂಶಗಳನ್ನು ಬಹಿರಂಗ ಸಭೆಯಲ್ಲಿ ಹೇಳುವುದಾಗಿ ಮಹೇಶ್ ಜೋಷಿ ತಿಳಿಸಿದರು ಎಂದು ವರದಿಯಾಗಿದೆ.

 

error: Content is protected !!

Join the Group

Join WhatsApp Group