ಕುವೈಟ್ ನಲ್ಲಿ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 06. ಕುವೈಟ್ ದೇಶದಲ್ಲಿ ರೇಡಿಯಾಲಜಿ, ಜನರಲ್ ಸರ್ಜರಿ, ಪಿಡಿಯಾಟ್ರಿಕ್ಸ್ ಸೇರಿದಂತೆ ವಿವಿಧ ವಿಭಾಗಗಳಿಗೆ ನುರಿತ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

 

ಆಕರ್ಷಕ ವೇತನ ಹಾಗೂ ಇತರೆ ಭತ್ಯೆಗಳಿಗೆ ಅವಕಾಶವಿದ್ದು, ಇದೇ ಜನವರಿ ಕೊನೆಯ ವಾರದಲ್ಲಿ ಸಂದರ್ಶನವಿದೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್: http://www.kaushalkar.com/doctor-registration-kuwait ಸಂಪರ್ಕಿಸಬಹುದು. ಆಸಕ್ತರು ಕಚೇರಿ ದಿನಗಳಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, 2ನೇ ಮಹಡಿ, ಉರ್ವ ಮಾರುಕಟ್ಟೆ ಕಟ್ಟಡ, ಉರ್ವ ಮಾರುಕಟ್ಟೆ, ಅಶೋಕ ನಗರ, ಮಂಗಳೂರು ಇಲ್ಲಿ ಖುದ್ದಾಗಿ ಬಂದು ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಲಹೆಗಾರರ ಮೊಬೈಲ್-9110248485 ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಾತೃಭಾಷೆಯ ಬಗ್ಗೆ ಪ್ರೀತಿ ಇರಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ

error: Content is protected !!
Scroll to Top