➤ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ➤ ನಾಲ್ವರ ಬಂಧನ..!

(ನ್ಯೂಸ್ ಕಡಬ) newskadaba.com, ಬೆಳಗಾವಿ, ಜ. 4. ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಗೋಕಾಕ ಪೊಲೀಸರಿಂದ ನಾಲ್ಕು ಜನ ಅರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.

ಗೋಕಾಕ್  ತಾಲೂಕಿನ ವೈಷ್ಣವಿ(21) ಉಪ್ಪಾರಟ್ಟಿಯ ಸುಧಾರಾಣಿ, ಐಶ್ವರ್ಯ(21)ಬಸವರಾಜ್ (27) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು 2022ರ ಅಗಸ್ಟ್ ನಲ್ಲಿ ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋ ಚಿಪ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದರು. ಬಂಧಿತರಿಂದ ಮೈಕ್ರೋ ಚಿಪ್, ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Also Read  ಶಾಲೆಯಲ್ಲಿ ರ‍್ಯಾಗಿಂಗ್ ➤ ಬೇಸತ್ತು ಬಾಲಕಿ ಆತ್ಮಹತ್ಯೆ

error: Content is protected !!
Scroll to Top