(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.07. ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದುದರಿಂದ ಸುಬ್ರಹ್ಮಣ್ಯ ಠಾಣೆಯ ಉಪ ನಿರೀಕ್ಷಕರಾದ ಗೋಪಾಲ್ ರವರು ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಉಬರಡ್ಕದಲ್ಲಿ ಗುರುವಾರದಂದು ಬೆಳಿಗ್ಗೆ ನಡೆದಿದೆ.
ಸುಬ್ರಹ್ಮಣ್ಯ ಠಾಣಾ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ರವರು ಕೊಂಬೋಟು ಕುಟುಂಬದ ಕಾರ್ಯಕ್ರಮವನ್ನು ಮುಗಿಸಿ ಗುರುವಾರದಂದು ಬೆಳಿಗ್ಗೆ ಹಿಂತಿರುಗುತ್ತಿದ್ದಾಗ ಉಬರಡ್ಕದ ಮಿತ್ತೂರು ಎಂಬಲ್ಲಿ ಗೋಪಾಲ್ ರವರು ಚಲಾಯಿಸುತ್ತಿದ್ದ ಮಾರುತಿ ಆಲ್ಟೋ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಮನೆಯೊಂದರ ಛಾವಣಿಗೆ ಹತ್ತಿ ನಿಂತಿದೆ. ಇದರಿಂದಾಗಿ ಗೋಪಾಲ್ ರವರ ತಲೆಗೆ ಗಾಯಗಳಾಗಿದ್ದು, ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆನ್ನಲಾಗಿದೆ.