37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಮುಂದೂಡಿಕೆ .!!!         

(ನ್ಯೂಸ್ ಕಡಬ) newskadaba.com ಕಲಬುರಗಿ, ಜ. 03. ಪೂಜ್ಯನೀಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವ ಕಾರಣ ವಿಜಯಪುರದಲ್ಲಿ ಜನವರಿ 9 & 10 ರಂದು ನಡೆಯಲಿರುವ ಸಮ್ಮೇಳನ ಮುಂದೂಡುವ ಅನಿವಾರ್ಯತೆ ಎದುರಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ತಿಳಿಸಿದ್ದಾರೆ.

ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸಮ್ಮೇಳನವನ್ನು ನಡೆಸುವುದು ಕಷ್ಟವಾಗುವುದರಿಂದ ಸಮ್ಮೇಳನ ಮುಂದೂಡುವಂತೆ ಆತಿಥ್ಯ ವಹಿಸಿರುವ ವಿಜಯಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ವಿನಂತಿಸಿಕೊಂಡಿದೆ. ಈ ಹಿನ್ನೆಲೆ ಸಮ್ಮೇಳನವನ್ನು ಮುಂದೂಡುವುದು ಅನಿವಾರ್ಯವಾಗಿದ್ದು, ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಸಮ್ಮೇಳನದ ಮುಂದಿನ ದಿನಾಂಕವನ್ನು ಶೀಘ್ರವಾಗಿ ತಿಳಿಸಲಾಗುವುದು ಎಂದಿದ್ದಾರೆ.

Also Read  ಕಡಬದ ಅಡಿಗ ಮೋಟಾರ್ಸ್ ನಲ್ಲಿ ಮೆಗಾ ಸರ್ವೀಸ್ ಕಾರ್ನಿವಲ್ 2021 ➤ ಸೇಲ್ಸ್ & ಸರ್ವೀಸ್ ನಲ್ಲಿ ವಿಶೇಷ ಆಫರ್

error: Content is protected !!
Scroll to Top