ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ ಮಾಡುವುದು ದೇವರು ಮೆಚ್ಚುವ ಕೆಲಸ ➤ ಸಯ್ಯದ್ ಜೈನುಲ್ ಆಬಿದಿನ್

(ನ್ಯೂಸ್ ಕಡಬ) newskadaba.com. ಕುಶಾಲನಗರ,  ಜ.2.  ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹ ಕಾರ್ಯವು ದೇವರು ಇಷ್ಟಪಡುವ ವಿಷಯಗಳಲ್ಲಿ ಒಂದಾಗಿದೆ ಎಂದು ಪಾಣಕ್ಕಾಡಿನ ಸಯ್ಯದ್  ಜೈನುಲ್ ಆಬಿದಿನ್ ಹೇಳಿದ್ದರು.

ಕುಶಾಲ ನಗರ ಪಟ್ಟಣದ ಅಲ್ ಇಹ್ಸಾನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 13ನೇ ವರ್ಷದ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಡ ಹೆಣ್ಣು ಮಕ್ಕಳ ಜೀವನದ ಬಾಗಿಲನ್ನು ತೆರೆಯುವ ಕೆಲಸವನ್ನು ಅಲ್ ಇಹ್ಸಾನ್ ಅಸೋಸಿಯೇಷನ್ ಮಾಡುತ್ತಿದೆ. ಮುಂದೆಯು ಈ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂದರು.

Also Read  ಪುತ್ತೂರು: ಆಕ್ಟಿವಾ ಹಾಗೂ ಬೈಕ್ ನಡುವೆ ಢಿಕ್ಕಿ

ಈ ಸಂಧರ್ಭದಲ್ಲಿ ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ್, ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಚರಣ್, ಪ್ರಾಶುಪಾಲ ತಮ್ಲೀಕ್ ದಾರಿಮಿ, ಹಿಲಾಲ್ ಮಸೀದಿ ಅಧ್ಯಕ್ಷ ಎಂ. ಹುಸೇನ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top