ಬೀದಿ ಕಸ ಗುಡಿಸುವ ಮಹಿಳೆ ಗಯಾದ ಹೊಸ ಉಪ ಮೇಯರ್..!!!

(ನ್ಯೂಸ್ ಕಡಬ) newskadaba.com ಪಟ್ನಾ, ಜ. 02. ಗಯಾ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಬೀದಿ ಕಸ ಗುಡಿಸುವ ಮಹಿಳೆಯೊಬ್ಬರು ಅಪರೂಪದ ಸಾಧನೆ ಮಾಡಿದ್ದು, ಗಯಾದ ಉಪ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.


60 ವರ್ಷದ ‘ಸ್ವೀಪರ್’ ಚಿಂತಾದೇವಿ ಅವರು ಇದೀಗ ಗಯಾ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದೇ ಚಿಂತಾದೇವಿ ಅವರು ದಶಕಗಳಿಂದಲೂ ಗಯಾದಲ್ಲಿ ಬೀದಿ ಕಸಗುಡಿಸುತ್ತಾ, ಒಳಚರಂಜಿ ಸ್ವಚ್ಛಗೊಳಿಸುತ್ತ ಜೀವನ ಸಾಗಿಸಿದ್ದಾರೆ. ಜೀವನೋಪಾಯಕ್ಕಾಗಿ ಇದೇ ಚಿಂತಾದೇವಿ ಅವರು ನಿಂಬೆಹಣ್ಣುಗಳನ್ನು ಕೂಡ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಾರ್ಪೋರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚಿಂತಾದೇವಿ ಅವರು ಗೆಲುವು ಸಾಧಿಸಿದ್ದು ಮಾತ್ರವಲ್ಲದೇ ಅಚ್ಚರಿ ರೀತಿಯಲ್ಲಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Also Read  ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌

error: Content is protected !!
Scroll to Top