(ನ್ಯೂಸ್ ಕಡಬ) newskadaba.com ನವದೆಹಲಿ, ಜ.01. ಕಳೆದ ವರ್ಷದಲ್ಲಿ ಏಷ್ಯಾದ ಅತ್ಯಂತ ಕಳಪೆ ಕರೆನ್ಸಿಯಾಗಿ ಭಾರತದ ರೂಪಾಯಿ ಗರಿಷ್ಠ ಕುಸಿತ ಕಂಡಿದ್ದು, ಇದೇ ಮೊದಲ ಬಾರಿಗೆ ಡಾಲರ್ ಎದುರು 82.75 ರೂ.ಗಳಿಗೆ ಬಂದು ನಿಂತಿದೆ.
2021ರ ಡಿಸೆಂಬರ್ ಅಂತ್ಯದ ವೇಳೆಗೆ ಅಮೆರಿಕನ್ ಡಾಲರ್ ಎದುರು 74.33 ಇದ್ದ ಭಾರತದ ರೂಪಾಯಿ ಮೌಲ್ಯ 2022ರ ಡಿಸೆಂಬರ್ 31ಕ್ಕೆ ತೀವ್ರ ಕುಸಿತ ಕಾಣುವ ಮೂಲಕ 82.75 ಆಗಿದೆ. ಇದೇ ವೇಳೆ ಅಮೆರಿಕದ ಡಾಲರ್ ಅತಿಹೆಚ್ಚು ಗಳಿಕೆ ಕಂಡಿದ್ದು, 2015ರಿಂದ ಗರಿಷ್ಠ ಏರಿಕೆಯಾಗುತ್ತಲೇ ಇದೆ. ಇಂದು (ಜ.01) ಕೂಡಾ ರೂಪಾಯಿ ಮೌಲ್ಯ 82.75 ರೂ. ನಲ್ಲೇ ನಿಂತಿದ್ದು, ಡಾಲರ್ ಎದುರು ಮಂಡಿಯೂರಿ ನಿಂತಂತಾಗಿದೆ.