(ನ್ಯೂಸ್ ಕಡಬ) newskadaba.com ಕಡಬ, ಡಿ.06. ಸರಸ್ವತೀ ವಿದ್ಯಾಲಯ ಪ್ರೌಢ ಮತ್ತು ಪದವಿಪೂರ್ವ ವಿಭಾಗದ ಬಂಟ್ರ ಗ್ರಾಮ ವಿಕಾಸ ಸಮಿತಿಯ ವತಿಯಿಂದ ಮರ್ಧಾಳ ಅಂಬೇಡ್ಕರ್ ಭವನದಲ್ಲಿ ಮನೆಮದ್ದು ಮಾಹಿತಿ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಉಷಾ ಮನೋಹರ್ ರೈ ಮಾತನಾಡಿ, ನಮ್ಮ ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಕೆಲವು ರೋಗಗಳ ಉಪಶಮನಕ್ಕೆ ಔಷಧ ದೊರೆಯುತ್ತದೆ. ಆದರೆ ಇದೆಲ್ಲವುಗಳ ಮಾಹಿತಿ ತಿಳಿಯದೆ ಆಸ್ಪತ್ರೆಯನ್ನೇ ಅವಲಂಬಿಸಿದ್ದೇವೆ. ಮನೆ ಮದ್ದಿನ ಮಾಹಿತಿ ಯುವ ಪೀಳಿಗೆಯ ಮೂಲಕ ಪಸರಿಬೇಕಾದಲ್ಲಿ ಮಾಹಿತಿ ಅಗತ್ಯ. ಸುಮಾರು 25 ರೋಗಗಳಿಗೆ ಮನೆಮದ್ದನ್ನು ತಿಳಿಸಿದರು.
ಮರ್ದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಲಿತಾ ಸತೀಶ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಅಧ್ಯಕ್ಷತೆ ವಹಿಸಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಗ್ರಾಮವಿಕಾಸ ಸಮಿತಿಯ ಪ್ರತಿನಿಧಿ ವೆಂಕಟೇಶ್ ಮತನಾಡಿದರು. ಸರಸ್ವತೀ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಶಿವಪ್ರಸಾದ್ ಮೈಲೇರಿ ಮತ್ತು ಬಂಟ್ರ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ದಿನೇಶ್ ಕೊಲ್ಲೆಸಾಗು ಉಪಸ್ಥಿತರಿದ್ದರು.