(ನ್ಯೂಸ್ ಕಡಬ) newskadaba.com ಡಿ. 31. ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:-
ಅಂಜೂರ – 5, ಖರ್ಜೂರ – 2, ವಾಲ್ನಟ್ – 5, ಬಾದಾಮಿ – 5, ಗೋಡಂಬಿ – 10, ಒಣ ದ್ರಾಕ್ಷಿ – 10, ಪಿಸ್ತಾ – 10, ತಣ್ಣಗಿನ ಹಾಲು – 2 ಕಪ್, ವೆನಿಲ್ಲಾ ಎಸೆನ್ಸ್– ಅರ್ಧ ಚಮಚ, ಸಕ್ಕರೆ ಅಥವಾ ಜೇನುತುಪ್ಪ – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:-
- ಮೊದಲಿಗೆ ಒಂದು ಬಟ್ಟಲಿನಲ್ಲಿ 1-2 ಬಟ್ಟಲು ಬೆಚ್ಚಗಿನ ನೀರು ತೆಗೆದುಕೊಂಡು, ಅದರಲ್ಲಿ ಅಂಜೂರ, ಖರ್ಜೂರ, ವಾಲ್ನಟ್, ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ ಹಾಗೂ ಪಿಸ್ತಾ ಹಾಕಿ 30 ನಿಮಿಷ ನೆನೆಸಿಡಿ.
- ಡ್ರೈಫ್ರೂಟ್ಸ್ 30 ನಿಮಿಷ ಚೆನ್ನಾಗಿ ನೆನೆದ ಬಳಿಕ ಅವುಗಳನ್ನು ನೀರಿನಿಂದ ತೆಗೆದು ಬ್ಲೆಂಡರ್‌ಗೆ ವರ್ಗಾಯಿಸಿ, ಚೆನ್ನಾಗಿ ರುಬ್ಬಿಕೊಳ್ಳಿ.
- 3.ಈಗ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ತಣ್ಣಗಿನ ಹಾಲನ್ನು ಸೇರಿಸಿ ಮಿಶ್ರಣ ಮಾಡಿ.
- ನಿಮ್ಮ ರುಚಿಗೆ ಅನುಸಾರ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ, ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ರುಚಿಕರವಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಸವಿಯಲು ಸಿದ್ಧ.