ಟೂರಿಸ್ಟ್ ವಾಹನಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ      

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 31. ಟೂರಿಸ್ಟ್ ವಾಹನಗಳಿಗೆ ಕೇರಳ ರಾಜ್ಯದಲ್ಲಿ ಎರಡು ತಿಂಗಳುಗಳಿಂದ ಬಿಗಿ ನಿಯಮ ವಿಧಿಸಿರುವುದರಿಂದ ರಾಜ್ಯದ ಬಸ್ ಗಳು ಅತ್ತ ತೆರಳಲು ಹಿಂದೇಟು ಹಾಕುತ್ತಿದೆ ಎಂದು ತಿಳಿದುಬಂದಿದೆ.

ಕೇರಳದಲ್ಲಿ ಟೂರಿಸ್ಟ್ ಬಸ್ ಗಳ ನಿಯಮದ ಪ್ರಕಾರ ಬಿಳಿ ಹಾಗೂ ಹಳದಿ ಮಿಶ್ರಿತ ಬಿಳಿ ಬಣ್ಣವನ್ನು ಒಳಗೊಂಡಿರಬೇಕು. ಆದರೆ, ಈಗಾಗಲೇ ಶೇ. 90ರಷ್ಟು ಬಸ್ ಗಳು ತಮ್ಮದೇ ಆದ ಬಣ್ಣವನ್ನು ಬಳಿದು ಸಿಂಗರಿಸಿಕೊಂಡಿದೆ. ಜೊತೆಗೆ ಬಸ್ ನ ಹೊರಭಾಗದಲ್ಲಿ ಹೆಚ್ಚುವರಿ ಲೈಟ್ ಗಳನ್ನೂ ಅಳವಡಿಸಲಾಗುತ್ತಿದೆ. ಜೊತೆಗೆ ಡಿ.ಜೆ ಸದ್ದು. ಈ ಎಲ್ಲಾ ಅಂಶಗಳು ಅಪಘಾತಕ್ಕೆ ಕಾರಣವಾಗುತ್ತದೆ ಎಂಬ ಅಂಶ ಇಟ್ಟುಕೊಂಡು ಸರಕಾರ ಟೂರಿಸ್ಟ್ ಬಸ್ ಗಳಿಗೆ ಬಿಗಿ ನಿಯಮ ಜಾರಿಗೊಳಿಸಿದೆ.

Also Read  ಮಂಗಳೂರು: 60 ರೌಡಿ ಶೀಟರ್ ಗಳ ಮನೆಗೆ ಪೊಲೀಸ್ ದಾಳಿ 

 

error: Content is protected !!
Scroll to Top