ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಪುತ್ತೂರಿನ ವಜೀದಾಬಾನು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 29. ನವದೆಹಲಿಯಲ್ಲಿ ನಡೆ ಯಲಿರುವ ಗಣ ರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು ಪುತ್ತೂರಿನ ಡಾ.ವಜಿದಾಬಾನು ಆಯ್ಕೆಯಾಗಿದ್ದಾರೆ.

 

ಎನ್ಎಸ್ಎಸ್ ನಡೆಸಿದ ದಕ್ಷಿಣ ಪ್ರಾಂತೀಯ ಪ್ರೀ ಆರ್‌.ಡಿ ಶಿಬಿರದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಳು ಮಂದಿಯಲ್ಲಿ ಇವರು ಒಬ್ಬರಾಗಿದ್ದಾರೆ. ಪುತ್ತೂರು ಅಂಬಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಜೀದಾಬಾನು, ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಇಸ್ಮಾಯಿಲ್ ಮತ್ತು ಸುಫಿಯಾ ಬಾನು ದಂಪತಿಯ ಪುತ್ರಿ. ಎ.ಜೆ ದಂತ ವೈದ್ಯಕೀಯ ಕಾಲೇಜಿನಿಂದ ದಂತ ವೈದ್ಯಕೀಯ ಪದವಿ ಪಡೆದಿದ್ದು ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಆರು ವಿಷಯಗಳಲ್ಲಿ ರ‍್ಯಾಂಕ್‌ ಗಳಿಸಿದ್ದಾರೆ.

Also Read  ಗುಜರಾತ್ ನಿಂದ ಕ್ವಾರಂಟೈನ್ ಇಲ್ಲದೆ ಕಡಬಕ್ಕೆ ಆಗಮಿಸಿದ ಕುಟುಂಬ ➤ ಸಾರ್ವಜನಿಕರಲ್ಲಿ ಆತಂಕ

error: Content is protected !!
Scroll to Top