ಕಾಲೇಜು ವಿದ್ಯಾರ್ಥಿನಿಯರಿಗೆ ಟಿಪ್ಪರ್ ಢಿಕ್ಕಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಸಾಗರ, ಡಿ. 28. ಟಪ್ಪರ್ ಢಿಕ್ಕಿ ಹೊಡೆದು ಶಾಲೆಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಸಾಗರದ ತಣ್ಣಮನೆ ಸೇತುವೆಯ ಬಳಿ ಬುಧವಾರದಂದು ನಡೆದಿದೆ.


ಗಾಯಗೊಂಡವರನ್ನು ಪ್ರತಿಮಾ, ಐಶ್ವರ್ಯಾ ಹಾಗೂ ಅಂಕಿತಾ ಎಂದು ಗುರುತಿಸಲಾಗಿದೆ. ಇವರು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಢಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಾಳುಗಳ ಪೈಕಿ ಪ್ರತಿಮಾ ಎಂಬಾಕೆ ಗಂಭೀರ ಗಾಯಗೊಂಡಿದ್ದು, ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ಅಜಾಗರೂಕತಯೇ ಅಪಘಾತಕ್ಕೆ ಕಾರಣ ಎಂದೆನ್ನಲಾಗಿದೆ.

Scroll to Top