ಮಲ್ಪೆ ಬೀಚ್ ನಲ್ಲಿ ಸಿಕ್ಕಿದ 22 ಕೆಜಿ ತೂಕದ ಗೋಳಿ ಮೀನು ➤ ಬರೋಬ್ಬರಿ 2.34 ಲಕ್ಷ ರೂ. ಗೆ ಹರಾಜು…!



(ನ್ಯೂಸ್ ಕಡಬ) newskadaba.com ಉಡುಪಿ, ಡಿ. 27. ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಗೋಳಿ ಮೀನು ಬರೋಬ್ಬರಿ 2,34,080 ರೂಪಾಯಿಗೆ ಮಾರಾಟವಾಗಿದೆ. ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಸಿಕ್ಕ 22 ಕೆ.ಜಿ. ತೂಕದ ಈ ಮೀನು ಮೀನುಗಾರರ ಪಾಲಿಗೆ ಲಾಭದಾಯಕವಾಗಿದೆ.







ಹಾಗಾದರೆ ಕೇವಲ 22 ಕೆ.ಜಿ. ತೂಕದ ಮೀನಿಗೆ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ರಾ ಎಂದು ಉಬ್ಬೇರಿಸಬೇಡಿ. ಇದು ಗೋಳಿ ಮೀನು. ಔಷಧಕ್ಕೆ ಬಳಕೆಯಾಗುವ ಗೋಳಿ ಮೀನಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು. ಆಳಸಮುದ್ರ ಮೀನುಗಾರಿಕಾ ಬೋಟ್‌ನ ಬಲೆಗೆ ಬಿದ್ದ ಗೋಳಿ ಮೀನನ್ನು ಮಲ್ಪೆ ಬಂದರಿನಲ್ಲಿ ಹರಾಜು ಹಾಕಿದ್ದು, ಅದು 2,34,080 ರೂ.ಗೆ ಮಾರಾಟವಾಗಿದೆ ಎನ್ನಲಾಗಿದೆ.






error: Content is protected !!
Scroll to Top