ರಾಜ್ಯಕ್ಕೆ ಬರಲಿದೆ ಮಲೇಷಿಯಾ ಮರಳು ► ಅಂಗಡಿಗಳಲ್ಲಿ ಸಿಗಲಿದೆ 50 ಕೆಜಿಯ ಎಂಎಸ್ಐಎಲ್ ಮರಳು ಚೀಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.02. ರಾಜ್ಯದಲ್ಲಿ ತಲೆದೋರಿರುವ ಮರಳಿನ ಅಭಾವವನ್ನು ನೀಗಿಸಲು ಮಲೇಷಿಯಾದಿಂದ ಮರಳನ್ನು ಆಮದು ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

2018 ರ ಜನವರಿಯಿಂದ ಮಲೇಷಿಯಾದಿಂದ ಮರಳನ್ನು ಆಮದು ಮಾಡಿಕೊಂಡು ಎಂಎಸ್ಐಎಲ್ ಮೂಲಕ ಹಂಚಲಾಗುವುದು. 50 ಕೆಜಿಯ ಚೀಲಗಳಲ್ಲಿ ಮರಳನ್ನು ತುಂಬಿ ಅಗತ್ಯಕ್ಕನುಸಾರ ಹಂಚಲಾಗುವುದು ಎಂದ ಅವರು ಪ್ರತಿ ಟನ್ ಮರಳಿಗೆ ಅಂದಾಜು 3500 ರಿಂದ 3800 ರೂ. ಗಳವರೆಗೆ ದರ‌ ಇರಲಿದೆ. ಮರಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಅಲ್ಲಿನ ಸರಕಾರದ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದೆಯೆಂದರು.

Also Read  ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ - ಎಡವಟ್ಟು ಮಾಡಿಕೊಂಡ ಕಾಂಗ್ರೆಸ್

error: Content is protected !!
Scroll to Top