ಹೊಸ ವರ್ಷಾಚರಣೆಗೆ ಬಿತ್ತು ಟಫ್ ರೂಲ್ಸ್..!!! ➤ ರಾಜ್ಯ ಸರಕಾರದಿಂದ ಹೊಸ ಕೊರೋನಾ ಗೈಡ್ ಲೈನ್ಸ್ ರಿಲೀಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 26. ರಾಜ್ಯ ಸರಕಾರವು ಕೊರೊನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನ ಕೈಗೊಂಡಿದ್ದು, ಎಲ್ಲಾ ಥಿಯೇಟರ್‌ ಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮ ಪಾಲಿಸಬೇಕು. ಕೊರೊನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೋವಿಡ್‌ ಸಭೆ ಬಳಿಕ ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್‌, ಸ್ವಯಂ ಪ್ರೇರಿತವಾಗಿ ಮೂರನೇ ಡೋಸ್‌ ಲಸಿಕೆಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಹೊರ ದೇಶದವರನ್ನು ರ್ಯಾಂಡಮ್‌ ರೀತಿಯಲ್ಲಿ ಟೆಸ್ಟ್‌ ಮಾಡಲಾಗುವುದು. ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧವನ್ನು ಹೇರಿಲ್ಲ, ಆದರೆ ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗುವುದು ಅಂತ ಹೇಳಿದರು. ಇನ್ನು ದಂಡಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ, ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಶಾಲಾ ಕಾಲೇಜುಗಳ ಕ್ಲಾಸ್ ರೂಮ್‌ ಒಳಗೆ ಹಾಗೂ ಶಾಲೆಗೆ ಬರುವ ಮುನ್ನ ಕೊಠಡಿ ಬಳಿಯಲ್ಲಿ ಸ್ಯಾನಿಟೈಸರ್‌ ಇಡಬೇಕು. ಇದಲ್ಲದೇ ಹೊಸ ವರ್ಷದ ಆಚರಣೆಗೆ ಒಂದು ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಹೊಟೆಲ್‌ನಲ್ಲಿ ಇರೋ ಟೇಬಲ್‌ಗಳಲ್ಲಿ ಮಾತ್ರ ಸರ್ವಿಸ್‌ ನೀಡಲು ಅವಕಾಶವಿದ್ದು, ಹೆಚ್ಚಿನ ಟೇಬಲ್‌ಗಳನ್ನು ಹಾಕಲು ಅವಕಾಶವಿಲ್ಲ, ಸರ್ವರ್ ಗಳು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆಯನ್ನು ಹಾಕಿಸಿಕೊಂಡಿರಬೇಕು ಎಂದು ಸಚಿವರು ಹೇಳಿದರು.

error: Content is protected !!

Join the Group

Join WhatsApp Group