ಪುತ್ತೂರು: ಕುಸಿದು ಬಿದ್ದು ವ್ಯಕ್ತಿ ಮೃತ್ಯು 

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 26. ಮನೆಯ ಟೆರೇಸಿಗೆ ಹತ್ತುವ ಮೆಟ್ಟಿಲಿನ ಸಮೀಪ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಾಲ್ಮರ ಮುದ್ದೋಡಿ ಎಂಬಲ್ಲಿ ಸಂಭವಿಸಿದೆ.

ಮೃತಪಟ್ಟವರನ್ನು ಸಾಲ್ಮರ ಮುದ್ದೋಡಿ ನಿವಾಸಿ ನಾರಾಯಣ ನಾಯ್ಕ (64) ಎಂದು ಗುರುತಿಸಲಾಗಿದೆ. ಅವರು ಮನೆಯ ಟೆರೇಸಿಗೆ ಹತ್ತುವ ಮೆಟ್ಟಿಲಿನ ಸಮೀಪ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

 

Scroll to Top