(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.01. ಕೇರಳ ಹಾಗೂ ತಮಿಳುನಾಡಿನಲ್ಲಿ ರುದ್ರ ನರ್ತನ ತೋರಿದ ‘ಓಖೀ’ ಚಂಡಮಾರುತವು ಇದೀಗ ಕರ್ನಾಟಕದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ.
ಚಂಡಮಾರುತದ ಪ್ರಭಾವದಿಂದಾಗಿ ಕೇರಳದಲ್ಲಿ ಸುರಿದ ಭಾರೀ ಮಳೆಯು 8 ಮಂದಿಯನ್ನು ಈಗಾಗಲೇ ಬಲಿ ತೆಗೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಕೇರಳದ ಬಹು ಭಾಗದಲ್ಲಿ ತನ್ನ ರುದ್ರ ನರ್ತನವನ್ನು ತೋರಿದ ‘ಓಖೀ’ ಚಂಡಮಾರುತವು ಕರ್ನಾಟಕದ ಕರಾವಳಿಯನ್ನೂ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಅರಬ್ಬೀ ಸಮುದ್ರ ಮೂಲಕ ಹಾದು ಹೋಗಲಿರುವ ಓಖೀ ಚಂಡಮಾರುತದ ಪ್ರಭಾವವು ಇಡೀ ಕರ್ನಾಟಕದಾದ್ಯಂತ ಬೀರುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಬಿಡುಗಡೆ ಮಾಡಿರುವ ಉಪಗ್ರಹ ಆಧಾರಿತ ಚಿತ್ರದಲ್ಲಿ ಕಂಡುಬಂದಿದೆ.
ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗುತ್ತಿರುವ ‘ಓಖೀ’ ಚಂಡಮಾರುತವು ಲಕ್ಷದ್ವೀಪದ ಕಡೆಗೆ ಮುಖಮಾಡಿದೆ.