ಕರಡಿ ದಾಳಿ  ➤ ಓರ್ವ ಮೃತ್ಯು                

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಡಿ. 26. ಕರಡಿಯೊಂದು ದನಗಾಹಿ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಪರಿಣಾಮ ಆತ ಸ್ಥಳದಲ್ಲೆ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಪುಣಜನೂರು ಗ್ರಾಮದ ರಾಜು ದು ಗುರುತಿಸಲಾಗಿದೆ. ಈತ ಎಂದಿನಂತೆ ದನಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕರಡಿ, ಈತನನ್ನು ಕಚ್ಚಿ ಸಾಯಿಸಿದಲ್ಲದೇ ದೇಹವನ್ನು ತಿಂದು ಹಾಕಿದೆ. ವಿಷಯ ತಿಳಿದ ವಲಯ ಅರಣ್ಯಧಿಕಾರಿ ನಿಸಾರ್ ಅಹಮದ್ ಹಾಗೂ ಅರಣ್ಯ ವೀಕ್ಷಕರಾದ ಚಪ್ಪಾಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರಡಿ ದಾಳಿಯಿಂದ ಪುಣಜನೂರು ಸುತ್ತ ಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

Also Read  ಐತ್ತೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ► ಪ್ರತಿ ಕುಟುಂಬಗಳು ಶೌಚಾಲಯ ಹೊಂದುವುದು ಕಡ್ಡಾಯ

 

error: Content is protected !!
Scroll to Top