ಇಂದಿನಿಂದ ಕೇಂದ್ರ ಮಾಹಿತಿ, ಪ್ರಸಾರ ಸಚಿವರ ದ.ಕ. ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 24. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅವರು ಡಿ. 24 ಹಾಗೂ 25ರಂದು ಮಂಗಳೂರು ಹಾಗೂ ಉಡುಪಿ ಪ್ರವಾಸ ಕೈಗೊಂಡಿದ್ದಾರೆ. ಡಿ.24ರ ಶನಿವಾರ ಸಂಜೆ 5.25ಕ್ಕೆ ದೆಹಲಿಯಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸುವರು. ಸಂಜೆ 5.30ಕ್ಕೆ ಉಡುಪಿಯ ಎಂ.ಜಿ. ಕ್ರೀಡಾಂಗಣಕ್ಕೆ ತೆರಳಲಿದ್ದಾರೆ. ಡಿ.25ರ ಭಾನುವಾರ ಬೆಳಿಗ್ಗೆ 6.40ಕ್ಕೆ ಮಂಗಳೂರಿನಿಂದ ವಿಮಾನ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

Also Read  ನೂಜಿಬಾಳ್ತಿಲ: ಉಚಿತ ಬ್ಯಾಗ್, ನೋಟ್‍ಬುಕ್ ವಿತರಣೆ

error: Content is protected !!
Scroll to Top