ಇಸ್ಲಾಮಾಬಾದ್‌ನಲ್ಲಿ ಕಾರ್ ಬಾಂಬ್ ಸ್ಫೋಟ   ➤ ಇಬ್ಬರು ಶಂಕಿತ ಉಗ್ರರು, ಓರ್ವ ಪೊಲೀಸ್  ಮೃತ್ಯು           

(ನ್ಯೂಸ್ ಕಡಬ) newskadaba.com  ಇಸ್ಲಾಮಾಬಾದ್ , ಡಿ.23.  ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು ಪಾಕ್ ಕಂಗೆಡುವಂತೆ ಮಾಡಿದೆ. ಇಸ್ಲಾಮಾಬಾದ್ ನ ವಸತಿ ಪ್ರದೇಶದಲ್ಲಿ ಪ್ರಬಲ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು ಇಬ್ಬರು ಶಂಕಿತ ಭಯೋತ್ಪಾದಕರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ದೇಶದ ಸುರಕ್ಷಿತ ನಗರಗಳಲ್ಲಿ ಒಂದಾದ ಇಸ್ಲಾಮಾಬಾದ್ ನಲ್ಲಿ ಭಯೋತ್ಪಾದಕರ ಉಪಸ್ಥಿತಿ ಭಯವನ್ನುಂಟು ಮಾಡಿದೆ. ಇನ್ನು ಬಾಂಬ್ ದಾಳಿಯಲ್ಲಿ ಕನಿಷ್ಠ ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಏಳು ಮಂದಿ ಸ್ಥಳೀಯರು ಗಾಯಗೊಂಡಿದ್ದಾರೆ.

Also Read  ವ್ಯಾಟ್ಸಪ್ ನಲ್ಲಿ ಸದ್ಯದಲ್ಲೇ ಬರಲಿದೆ ಈ ಹೊಸ ಫೀಚರ್

ಪಾಕಿಸ್ತಾನದ ರಾಜಧಾನಿಯಲ್ಲಿ ಶುಕ್ರವಾರದ ಬಾಂಬ್ ದಾಳಿಯು ಸೇನೆ ಮತ್ತು ಸರ್ಕಾರಿ ಬೇಹುಗಾರಿಕಾ ಏಜೆನ್ಸಿಗಳ ಭದ್ರಕೋಟೆಯಾದ ರಾವಲ್ಪಿಂಡಿಯ ಗ್ಯಾರಿಸನ್ ಪಟ್ಟಣದಿಂದ 15 ಕಿಲೋಮೀಟರ್ ದೂರದಲ್ಲಿ ನಡೆದಿದೆ.

 

 

 

error: Content is protected !!
Scroll to Top