ಜನವರಿಯಿಂದಲೇ  ಟಫ್​​ ರೂಲ್ಸ್  ಮಾಸ್ಕ್ ​ ಕಡ್ಡಾಯ    ➤ ಆರೋಗ್ಯ ಸಚಿವ ಡಾ.ಕೆ.ಸುಧಾಕರ್                             

(ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ.23. ಜನವರಿಯಿಂದಲೇ ಬೆಂಗಳೂರಲ್ಲಿ ಟಫ್​​ ರೂಲ್ಸ್​ ಜಾರಿಯಾಗಲಿದ್ದು, ಸರ್ಕಾರ  ಮಾಸ್ಕ್​​​​​ ಕಡ್ಡಾಯ ಮಾಡಲು ಸಜ್ಜಾಗಿದೆ. ಈಗ ಒಳಾಂಗಣದಲ್ಲಿ ಮಾಸ್ಕ್​ ಕಡ್ಡಾಯ ಮಾಡಿದೆ. ದಂಡ ಸಹಿತ ಮಾಸ್ಕ್​​ ಕಡ್ಡಾಯಕ್ಕೂ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಆರೋಗ್ಯ ಸಚಿವ ಡಾ.ಸುಧಾಕರ್​​ ಮಾತನಾಡಿ  ಮೊದಲ ಹಂತದಲ್ಲಿ ಕಠಿಣ ಕ್ರಮಗಳ ಜಾರಿಯಾಗಲಿದೆ. ಸೋಷಿಯಲ್​​ ಡಿಸ್ಟೆನ್ಸ್​ ಸೇರಿದಂತೆ ಹಲವು ಕ್ರಮ ಸಾಧ್ಯತೆ, ಮಾಲ್​​​​ಗಳು, ಬಿಗ್​ ಬಜಾರ್​ಗಳಿಗೆ ಪ್ರತ್ಯೇಕ ರೂಲ್ಸ್​ ಹಾಗೂ ಪಬ್​​​, ಬಾರ್​​​, ರೆಸ್ಟೋರೆಂಟ್​ಗಳಲ್ಲಿ ಮತ್ತಷ್ಟು ಕಠಿಣ ರೂಲ್ಸ್​ ಜಾರಿಯಾಗಲಿದೆ. ರೈಲ್ವೆ ನಿಲ್ದಾಣ, ಬಸ್​ ನಿಲ್ದಾಣಗಳಲ್ಲೂ ಥರ್ಮಲ್​ ಸ್ಕ್ರೀನಿಂಗ್​​​​, ಇನ್ನಷ್ಟು ಕ್ರಮಗಳ ಅಗತ್ಯವಿದೆ. ಸೋಮವಾರದಿಂದ ಬೂಸ್ಟರ್​​​ ಡೋಸ್​ ಶಿಬಿರ ಆರಂಭವಾಗಲಿದೆ. ಎಲ್ಲೆಡೆ ಬೂಸ್ಟರ್​​ ಡೋಸ್​ ಕೇಂದ್ರ ಸ್ಥಾಪಿಸಲು ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Also Read  ಉಡುಪಿ: ಕೃಷ್ಣ ಮಠ, ಕಮಲಶಿಲೆ, ಕೊಲ್ಲೂರು ದೇಗುಲಕ್ಕೆ ಡಿಕೆಶಿ ಭೇಟಿ

 

 

error: Content is protected !!
Scroll to Top