ಬೆಳ್ತಂಗಡಿ : ಶಬರಿಮಲೆ ಯಾತ್ರಿಕರ ಬಸ್ ಬ್ರೇಕ್ ಫೇಲ್ ➤ ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com  ಬೆಳ್ತಂಗಡಿ , ಡಿ 23  : ಬಳ್ಳಾರಿಯಿಂದ  ಶಬರಿಮಲೆಗೆ ಹೊರಟ ಮಿನಿ ಬಸ್ ಮುಂಡಾಜೆಯ ಉಳ್ಳಾಲ್ತಿ ಕಟ್ಟೆ ಎಂಬಲ್ಲಿ ಬ್ರೇಕ್ ಫೇಲ್ ಆಗಿ ಬಸ್ ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡ ಘಟನೆ  ಬೆಳ್ತಂಗಡಿಯಲ್ಲಿ ಸಂಭವಿಸಿದೆ.

ಗಾಯಾಳುಗಳನ್ನು ಕೂಡ್ಲಗಿ ತಾಲೂಕಿ ಚಿಕ್ಕಜೋಗೆ ಹಳ್ಳಿಯ ಶಶಿ, ಜಲಧರ ರಘು, ಬಸವರಾಜ್, ಲೋಕ ಎಂದು ಗುರುತಿಸಲಾಗಿದೆ.

ವಾಹನ ನಗ್ಗಿದ ಸ್ಥಳದಲ್ಲಿ ಕಂದಕ ಹಾಗೂ ವಿದ್ಯುತ್ ಕಂಬವಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತವೊಂದು ತಪ್ಪಿದೆ. ಘಟನೆ ನಡೆದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

error: Content is protected !!

Join WhatsApp Group

WhatsApp Share